Saturday, December 21, 2024

Latest Posts

ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಈ ಸೆಲೆಬ್ರಿಟಿಗಳಿಗೆ ಸಿಕ್ಕಿದೆ ಆಹ್ವಾನ..

- Advertisement -

National News: ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭ ನಡೆದಿದ್ದು, ರಾಜಕೀಯ ಗಣರು ಮಾತ್ರವಲ್ಲದೇ, ಸಿನಿಮಾ ಸೆಲೆಬ್ರಿಟಿಗಳನ್ನು ಸಹ ಆಹ್ವಾನಿಸಲಾಗಿದೆ.

ಜನವರಿ 22, 2024ರಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನಾ ಸಮಾರಂಭ ಪ್ರತೀ ಭಾರತೀಯನಿಗೂ ಹೆಮ್ಮೆಯ ವಿಷಯ. ಇನ್ನು ಇಂಥ ಕಾರ್ಯಕ್ರಮಕ್ಕೆ ಹೋಗಲು, ಅದೆಷ್ಟೋ ಜನ ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಎಲ್ಲರಿಗೂ ಇಂಥ ಸಮಾರಂಭಕ್ಕೆ ಹೋಗುವ ಯೋಗ ಬರುವುದಿಲ್ಲ. ಆದರೆ ಈ ರೀತಿ ಯೋಗ ಪಡೆದವರಲ್ಲಿ, ಹಲವು ಸಿನಿಮಾ ಸೆಲೆಬ್ರಿಟಿಗಳು ಇರುವುದು ವಿಶೇಷ. ಇನ್ನೂ ಖುಷಿಯ ಸಂಗತಿ ಅಂದ್ರೆ, ನಮ್ಮ ಕನ್ನಡದ ಸೆಲೆಬ್ರಿಟಿಗಳಿಗೂ, ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ಸಿಕ್ಕಿದೆ ಅನ್ನೋದು.

ಕನ್ನಡದ ನಟರಾದ ಯಶ್‌ಗೆ ಆಹ್ವಾನ ಸಿಕ್ಕಿದೆ. ರಿಷಬ್ ಶೆಟ್ಟಿಗೂ ಆಹ್ವಾನ ಸಿಕ್ಕಿರುವ ಸೂಚನೆ ಇದೆ. ಇನ್ನು ಬಾಲಿವುಡ್ ನಟರಾದ ಆಲಿಯಾ, ರಣಬೀರ್, ಪ್ರಭಾಸ್, ಸನ್ನಿ ಡಿಯೋಲ್, ಅಜಯ್ ದೇವಗನ್, ಆಯುಷ್ಮಾನ್ ಖುರಾನಾ, ಟೈಗರ್ ಷ್ರಾಫ್ ಇವರಿಗೆಲ್ಲ ಆಹ್ವಾನ ಹೋಗಿದೆ.

ಇನ್ನು ದಿಗ್ಗಜರಾದ ಸಚಿನ್ ಟೆಂಡೂಲ್ಕರ್, ಮುಖೇಶ್ ಅಂಬಾನಿ, ರತನ್ ಟಾಟಾ, ಗೌತಮ್ ಅದಾನಿ, ವಿರಾಟ್ ಕೊಹ್ಲಿ ಇವರಿಗೆಲ್ಲ ಆಹ್ವಾನ ಪತ್ರಿಕೆ ನೀಡಲಾಗಿದೆ. ಅಮಿತಾ ಬಚ್ಚನ್, ಅಕ್ಷಯ್ ಕುಮಾರ್, ಮಾಧುರಿ ದೀಕ್ಷಿತ್, ಅನುಪಮ್ ಖೇರ್, ಸಂಜಯ್ ಲೀಲಾ ಬನ್ಸಾಲಿ, ರಜನಿಕಾಂತ್, ಚಿರಂಜೀವಿ, ಮೋಹನ್‌ಲಾಲ್, ಧನುಷ್, ಇವರೆಲ್ಲರೂ ಕಾರ್ಯಕ್ರಮಕ್ಕೆ ಹಾಜರಾಗುವ ನಿರೀಕ್ಷೆ ಇದೆ.

‘ಮಿಮಿಕ್ರಿ ಅನ್ನೋದು ಒಂದು ಕಲೆ, ಅದನ್ನು ಸಾವಿರ ಬಾರಿ ಮಾಡುತ್ತೇನೆ’

‘ಬಿಜೆಪಿಗರು ಅಪಪ್ರಚಾರ ಮಾಡುತ್ತಿರುವುದು ಅವರ ಹತಾಶ ಮನಸ್ಥಿತಿಗೆ ಹಿಡಿದ ಕನ್ನಡಿ ಅಷ್ಟೇ’

‘ಅಶೋಕ್ ಅವರೇ, ಯಾಕೆ ನಮ್ಮ ಕೈಗೆ ಬಡಿಗೆ ಕೊಟ್ಟು ಬಡಿಸಿಕೊಳ್ತೀರಿ?’

- Advertisement -

Latest Posts

Don't Miss