- Advertisement -
ಹಾಸನ : ಕೆರೆಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ ಘಟನೆ ಹಾಸನ ತಾಲೂಕಿನ ತೇಜೂರು ಗ್ರಾಮದಲ್ಲಿ ನಡೆದಿದೆ. ಚಂದ್ರು (35), ಆನಂದ್ (30), ಮೃತ ದುರ್ದೈವಿಗಳಾಗಿದ್ದು, ವ್ಯವಹಾರದ ವಿಚಾರವಾಗಿ ಗಂಗೆ ಮೇಲೆ ಆಣೆ ಮಾಡಲು ಹೋದಾಗ ಈ ದುರ್ಘಟನೆ ನಡೆದಿದೆ.
ನಿನ್ನೆ ರಾತ್ರಿ ತೇಜೂರು ಕೆರೆಯ ಬಳಿ ನೀರಿನ ಮೇಲೆ ಆಣೆ ಮಾಡಲು ಹೋಗಿದ್ದರು. ಸಿಹಿ ತಿಂಡಿ ತಯಾರಿಸುವ ಕೆಲಸಕ್ಕೆ ಹಣ ಪಡೆದು, ಕೆಲಸಕ್ಕೆ ಹೋಗದ ಕಾರಣ ಗಂಗೆ ಮೇಲೆ ಆಣೆ ಮಾಡಲು ಇಬ್ಬರೂ ತೆರಳಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ಇಬ್ಬರೂ ಸಾವನ್ನಪ್ಪಿದ್ದಾರೆ. ಸ್ಥಳೀಯರು ಬೆಳಿಗ್ಗೆ ಶವ ಹೊರ ತೆಗೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
- Advertisement -