Sandalwood News: ಹಿಂದಿಯಲ್ಲಿ ಬರುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..? ಬಿಗ್‌ಬಿ ಅಮತಾಬ್ ಬಚ್ಚನ್ ನಡೆಸಿಕೊಡು ಈ ಕಾರ್ಯಕ್ರಮದಲ್ಲಿ ನಾನೂ ಒಂದು ದಿನ ಭಾಗವಹಿಸಬೇಕು ಎಂದು ಹಲವರಿಗೆ ಅನ್ನಿಸಿರುತ್ತದೆ. ಕನ್ನಡದವರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಲಕ್ಷ ಲಕ್ಷ ಗೆದ್ದಿದ್ದಾರೆ. ಇದೀಗ ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್‌ವುಡ್ ನಟರೊಬ್ಬರು, ಈ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾರೆ. ಅವರೇ ಶಿವಣ್ಣ.
ಹೌದು ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗದಿಂದ ನಟರೊಬ್ಬರು ಕೌನ್ ಬನೇಗಾ ಕರೋಡ್‌ಪತಿ ಶೋಗೆ ಹೋಗುತ್ತಿದ್ದಾರೆ. ಶಿವಣ್ಣನಿಗೆ ಅಮಿತಾಬ್ ಬಚ್ಚನ್ ಏನೂ ಹೊಸಬರಲ್ಲ. ಅಮಿತಾಬ್ ಶಿವಣ್ಣನ ಮನೆಗೆ ಭೇಟಿ ಕೊಟ್ಟಿದ್ದಾರೆ. ಇಬ್ಬರೂ ಕಲ್ಯಾಣ್ ಜುವೆಲ್ಲರ್ಸ್ ಆ್ಯಡ್‌ನಲ್ಲಿ ನಟಿಸಿದ್ದಾರೆ ಕೂಡ. ಇದೀಗ ಅವರೊಂದಿಗೆ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಭಾಗಿಯಾಗಲಿದ್ದಾರೆ.
ಇದೇ 18ರಂದು ಶಿವರಾಜ್‌ಕುಮಾರ್ ಅವರು, ಅಮೆರಿಕಕ್ಕೆ ಚಿಕಿತ್ಸೆಗಾಗಿ ಹೋಗಲಿದ್ದಾರೆ. ಅದಕ್ಕೂ ಮುನ್ನ ಕೆಲ ದಿನಗಳ ಹಿಂದೆ ಶಿವರಾಜ್‌ಕುಮಾರ್ ತಿರುಪತಿಗೆ ಹೋಗಿ ಮುಡಿ ಕೊಟ್ಟು ಬಂದಿದ್ದಾರೆ. ಭೈರತಿ ರಣಗಲ್‌ನಂಥ ಹಿಟ್ ಸಿನಿಮಾ ಕೊಟ್ಟಿರುವ ಶಿವಣ್ಣ, ತಮ್ಮ ಮುಂದಿನ ಶೂಟಿಂಗ್ ನ್ನು ಚಿಕಿತ್ಸೆ ಬಳಿಕ ಮುಂದುವರಿಸಲಿದ್ದಾರೆ.