Wednesday, May 29, 2024

Latest Posts

ಇದು ಧರ್ಮ ಅಧರ್ಮದ ಚುನಾವಣೆ.ಪ್ರಜಾಪ್ರಭುತ್ವದಲ್ಲಿ ಜನರ ಧ್ವನಿ ಕೇಳಬೇಕು: ಡಾ.ಸಿ.ಎನ್.ವಿಶ್ವನಾಥ್

- Advertisement -

Political News: ರಾಮನಗರದಲ್ಲಿ ಬಿಜೆಪಿ ಸಮಾವೇಶ ನಡೆದಿದ್ದು, ಶಾಸಕರಾದ ಡಾ. ಅಶ್ವಥ್ ನಾರಾಯಣ, ಮುನಿರತ್ನ, ಎಂ. ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್, ಮಾಜಿ ಶಾಸಕರಾದ ಡಿ. ನಾಗರಾಜಯ್ಯ, ಎ. ಮಂಜು , ನಿಖಿಲ್ ಕುಮಾರಸ್ವಾಮಿ ಹಾಗೂ ಜೆಡಿಎಸ್, ಬಿಜೆಪಿ ಮುಖಂಡರು ಭಾಗಿಯಾಗಿದ್ದರು. ಡಾ. ಮಂಜುನಾಥ್ ಪತ್ನಿ ಅನುಸೂಯ, ಹೆಚ್.ಡಿ. ದೇವೇಗೌಡ ಪುತ್ರಿ ಶೈಲಜಾ ಸಮಾವೇಶದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾವೇಶದಲ್ಲಿ ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣ ಮಾತನಾಡಿದ್ದು,  ಇದು ವಿಧಾನಸಭೆ ಚುನಾವಣೆ ಅಲ್ಲ, ಲೋಕಸಭೆ ಚುನಾವಣೆ. ಇದು ಧರ್ಮ ಅಧರ್ಮದ ಚುನಾವಣೆ. ಪ್ರಜಾಪ್ರಭುತ್ವದಲ್ಲಿ ಜನರ ಧ್ವನಿ ಕೇಳಬೇಕು. ದ್ವೇಷ, ಅಸೂಯೆ, ತೋಳ್ಬಲ, ದಬ್ಬಾಳಿಕೆಯ ವ್ಯಕ್ತಿಗಳು ನಮಗೆ ಬೇಡ. ಡಾ. ಮಂಜುನಾಥ್ ಜನ ಮೆಚ್ಚಿದ ನಾಯಕ.ಪ್ರತಿಯೊಬ್ಬ ಮತದಾರರನ್ನು ತಲುಪಲು ನಾವೆಲ್ಲಾ ಬೀದಿಗೆ ಇಳಿಯಬೇಕು ಎಂದರು.

ಸಮಾವೇಶದಲ್ಲಿ ಶಾಸಕ ಎಂ. ಕೃಷ್ಣಪ್ಪ ಮಾತನಾಡಿದ್ದು, ನನ್ನ ಕಾರ್ಯಕರ್ತರ ಪಡೆ ಇದೆ. ನನ್ನ ಕ್ಷೇತ್ರ ಅಂಡರ್ ಗ್ರೌಂಡ್ ಕೇಬಲ್ ರೀತಿ. ನಾನು ದಿನಾ ಪೂಜೆ ಮಾಡುವುದು ವಿನಾಯಕ ಮತ್ತು ಆನೆಯನ್ನು. ಆನೆ  ತರಹ ನಡೆಯುತ್ತೇನೆ, ಒಳ್ಳೆಯ ಲೀಡ್ ಕೊಡುತ್ತೇನೆ. ಮಂಜುನಾಥ್ ಅಭ್ಯರ್ಥಿ ಆಗಿರುವುದು ಕನಕಪುರಕ್ಕೆ ಸ್ವಾತಂತ್ರ್ಯ ಬಂದಂತೆ. ಕ್ಷೇತ್ರದಲ್ಲಿ ಭಯಂಕರ ದುಡ್ಡು ಬರುತ್ತಿದೆ. ಆ ಎಲ್ಲಾ ದುಡ್ಡು ನಿಮ್ಮದೇ. ಏ‌ನು ಕೊಟ್ಟರೂ ತೆಗೆದುಕೊಳ್ಳಿ, ಓಟು ಮಾತ್ರ ಬಿಜೆಪಿಗೆ ಹಾಕಿ ಎಂದು ಮನವಿ ಮಾಡಿದ್ದಾರೆ.

ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಾತನಾಡಿ,  ಹತ್ತು ವರ್ಷಗಳಿಂದ ರಾಮನಗರ ಜಿಲ್ಲೆ ರಾಕ್ಷಸರ ಕೈಗೆ ಸಿಕ್ಕಿದೆ. ಡಿ.ಕೆ. ಶಿವಕುಮಾರ್ ಈ ಜಿಲ್ಲೆಯಿಂದ ಗೆದ್ದು ಇಲ್ಲಿ ಏನೂ ಸಿಗಲ್ಲ ಅಂತಾ ಹೋಗಿದ್ದೀರಿ. ರಾಮನಗರದಿಂದ ಅಧಿಕಾರ ತೆಗೆದುಕೊಂಡು ಬೆಂಗಳೂರನ್ನು ಅಗೆಯುತ್ತಿದ್ದೀರಿ. ಡಿ.ಕೆ. ಶಿವಕುಮಾರ್ ಗೆ ರಾಮನಗರ ಬೇಕಿಲ್ಲ, ಲೂಟಿ ಮಾಡಲು ಬೆಂಗಳೂರು ಬೇಕು. ಡಿ.ಕೆ. ಸುರೇಶ್ ಆಗ ಸಿಕ್ಕಿದ್ದ, ಯಾಕಯ್ಯಾ ಬಂದಿದ್ದೀಯಾ ಜನ ನಿನ್ನ ಸೋಲಿಸುತ್ತಾರೆ ಅಂತಾ ಕೇಳಿದೆ. ಹೇ ಸುಮ್ಮನೆ ಜನ ನೋಡೋಣ ಅಂತಾ ಬಂದೆ ಎಂದು ಹೇಳಿದ್ರು. ಡಿಕೆಶಿ ನೋಟು, ಡಾ. ಮಂಜುನಾಥ್ ಗೆ ವೋಟು. ಇಂದು ಇದು ಅನಿವಾರ್ಯ. ಡಾ. ಮಂಜುನಾಥ್ ರನ್ನು ಗೆಲ್ಲಿಸಬೇಕಾದ ಅನಿವಾರ್ಯತೆ ನಿಮ್ಮ ಮೇಲಿದೆ. ಅವರಿಗೆ ಹಾಕುವ ವೋಟು ಕೇವಲ ಸಂಸದ ಮಾಡಲ್ಲ, ಕೇಂದ್ರ ಆರೋಗ್ಯ ಸಚಿವರನ್ನಾಗಿ ಮಾಡುತ್ತದೆ ಎಂದು ಸಿ,ಪಿ.ಯೋಗಿಶ್ವರ್ ಹೇಳಿದ್ದಾರೆ.

H. D. Kumaraswamy : ಮಂಡ್ಯ : ನಾಮಪತ್ರ ಸಲ್ಲಿಸಿದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ

ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ: ವಿಜಯೇಂದ್ರ ಆಹ್ವಾನದ ಬಳಿಕವೂ ಗೈರಾದ ಪ್ರೀತಂಗೌಡ

ನಾಮಪತ್ರ ಸಲ್ಲಿಕೆ ಬಳಿಕ ಡಿ.ಕೆ.ಸುರೇಶ್ ಕಾರಿಗೆ ಮೈತ್ರಿ ಕಾರ್ಯಕರ್ತರಿಂದ ಮುತ್ತಿಗೆ..

- Advertisement -

Latest Posts

Don't Miss