Friday, November 22, 2024

Latest Posts

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 4 ಜೋಡಿ ಮತ್ತೆ ಒಂದಾಗಿದ್ದು ಹೀಗೆ

- Advertisement -

Gadag News: ಗದಗ ಜಿಲ್ಲಾ ನ್ಯಾಯಾಲಯದಲ್ಲಿ ಜರುಗಿದ ರಾಷ್ಟೀಯ ಲೋಕ ಅದಾಲತ್ ಹಲವು ಅಪರೂಪದ ಘಟನೆಗಳಿಗೆ ಸಾಕ್ಷಿಯಾಗಿದೆ. ಸುಪ್ರೀಂ ಕೋರ್ಟಿನಲ್ಲಿ ದಾಖಲಾಗಿದ್ದ ಚೆಕ್ ಬೌನ್ಸ್ ಪ್ರಕರಣವೊಂದು ಜಿಲ್ಲಾ ಕೋರ್ಟನಲ್ಲಿ ಅಂತ್ಯವಾದ್ರೆ, ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ನಾಲ್ಕು ಜೋಡಿಗಳು ರಾಜಿ ಸಂಧಾನದ ಮೂಲಕ ಮತ್ತೆ ಒಂದಾಗಿವೆ. ಕೌಟುಂಬಿಕ ಕಲಹ, ಪರಸ್ಪರ ಮನಸ್ಥಾಪ, ಕೌಟುಂಬಿಕ ಸಮಸ್ಯೆಗಳಿಂದಾಗಿ ಈ ಜೋಡಿಗಳು ನ್ಯಾಯಾಲಯದ ಮೆಟ್ಟಿಲನ್ನ ಏರಿದ್ವು.

ಆದ್ರೆ ಇದೀಗ ಪರಸ್ಪರ ಮನಸ್ಥಾಪ ಬಿಟ್ಟು ಆ ಜೋಡಿಗಳು ಒಂದಾಗಿದ್ದು ನ್ಯಾಯಾಧೀಶರ ಸಮ್ಮುಖಸಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು, ಸಿಹಿ ತಿನ್ನಿಸೋ ಮೂಲಕ ಮತ್ತೆ ಒಂದಾಗಿದ್ದಾರೆ.‌ ಈ ಜೋಡಿಗಳಿಗೆ ನ್ಯಾಯಾಧೀಶರು ಪುಷ್ಪ ಹಾಕುವ ಮೂಲಕ ಪರಸ್ಪರ ಮನಸ್ಥಾಪವಿಲ್ಲದೇ, ಕಹಿ ಘಟನೆಗಳನ್ನ ಮರೆತು ಒಂದಾಗಿ ಬಾಳುವಂತೆ ತಿಳಿಸಿದ್ರು. ಜೊತೆಗೆ ಇನ್ನು ಮುಂದೆ ಕೋರ್ಟ ಮೆಟ್ಟಿಲೇರದಂತೆ ಬುದ್ದಿವಾದ ಹೇಳಿದ್ರು.

- Advertisement -

Latest Posts

Don't Miss