Dharwad News: ಧಾರವಾಡ ತಾಲೂಕಿನಲ್ಲಿ ಸಕ್ರಮ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ಮಾಡುವ ಘಟಕಕ್ಕೆ ದಾಳಿ ನಡೆದಿದೆ. ಜಿಲ್ಲಾಡಳಿತ ನಿರ್ದೇಶನ ಮೇರೆಗೆ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಜಿಲ್ಲಾಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಡಾಕ್ಟರ್ ಪ್ರಶಾಂತ್ ಬುಗುರಿ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ, ಘಟಕಕ್ಕೆ ನೋಟಿಸ್ ಜಾರಿಮಾಡಿ ದಂಡ ವಿಧಿಸಲಾಗಿದೆ .
ಧಾರವಾಡ: ಸುದ್ದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಅಧಿಕಾರಿಗಳು ಎಚ್ಚೆತ್ತುಗೊಂಡು ಜಿಲ್ಲಾಡಳಿತ ನಿರ್ದೇಶನ ಮೇರೆಗೆ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಅಧಿಕಾರಿಗಳು ಧಾರವಾಡ ತಾಲೂಕಿನ ಮಂಡಿಹಾಳ ಗ್ರಾಮದ ಗಣಿಗಾರಿಕೆ ಮಾಡುವ ಘಟಕಗಳ ವಿರುದ್ಧ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಂಡಿದ್ದಾರೆ.
ತಾಲೂಕಿನ ಮಂಡಿಹಾಳ್ ಸುತ್ತ ಮುತ್ತ ಲೈಸೆನ್ಸ್ ಇದ್ದರೂ ಕೂಡ ಅಕ್ರಮವಾಗಿ ಕಲ್ಲು ಕ್ವಾರಿ ಬ್ಲಾಸ್ಟ್ ಮಾಡುವ ಕಲ್ಲು ಗಣಿಗಾರಿಕೆಯ ಮಾಡುತ್ತಿದ್ದ ಘಟಕದ ಮೇಲೆ ಜಿಲ್ಲಾಡಳಿತ ನಿರ್ದೇಶನದ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನೇತೃತ್ವದ ತಂಡ ದಾಳಿ ನಡೆಸಿ ಗಣಿಗಾರಿಕೆಗೆ ಬೀಗ ಮುದ್ರೆ ಹಾಕಿ ಮಾಲಿಕರ ವಿರುದ್ಧ ನೋಟಿಸ್ ಜಾರಿಗೊಳಿಸಿದೆ.
ದಾಖಲಾತಿ ಪರಿಶೀಲನೆ ಮಾಡೋ ವರೆಗೆ ಯಾವುದೆ ರೀತಿಯ ಚಟುವಟಿಕೆಗಳನ್ನು ಮಾಡದಂತೆ ಜಿಲ್ಲಾ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿ ಉಮೇಶ್ ಬಗರಿ ಮಾಲಿಕರಿಗೆ ಸೂಚಿಸಿದರು.
ಈ ವೇಳೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನ ಅಧಿಕಾರಿ ಡಾಕ್ಟರ್ ಉಮೇಶ್ ಬಗರಿ ಇಲಾಖೆಯ ಅಧಿಕಾರಿ ಮಹೇಶ್ ಗೌಡರ್ ಸೇರಿದಂತೆ, ಮತ್ತಿತರರು ಇದ್ದರು.
ಸಂಗಮೇಶ್ ಶೆಟ್ಟಿಗಾರ್, ಕಿತ್ತೂರು ಕರ್ನಾಟಕ ಬ್ಯೂರೋ ಮುಖ್ಯಸ್ಥರು