Tuesday, October 22, 2024

Latest Posts

ಆಫ್ರಿಕಾ ಕ್ರಿಕೇಟಿಗನಿಗೂ ಇಷ್ಟವಾಗಿದೆಯಂತೆ ಈ ರಾಮಭಜನೆ..

- Advertisement -

Cricket News: ಜನವರಿ 22ಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಯಾಗಲಿದ್ದು, ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆಯಾಗಲಿದೆ. ಹೀಗಾಗಿ ಬರೀ ಭಾರತದಲ್ಲಷ್ಟೇ ಅಲ್ಲ. ಇಡೀ ಪ್ರಪಂಚದಾದ್ಯಂತ ಈಗ ಇದೇ ಸುದ್ದಿ ಟ್ರೆಂಡಿಂಗ್‌ನಲ್ಲಿ ಇರೋದು. ಪ್ರಪಂಚದ ಬೇರೆ ಬೇರೆ ದೇಶದಲ್ಲಿರುವ ಹಿಂದೂಯೇತರರು ಕೂಡ, ರಾಮಭಜನೆ, ರಾಮಕಥೆಯನ್ನು ಮೆಚ್ಚುತ್ತಿದ್ದಾರೆ.

ಇದೇ ರೀತಿ ಆಫ್ರಿಕಾದ ಕ್ರಿಕೇಟಿಗ ರಾಮ ಭಜನೆ ಕೇಳುವುದೇ ಒಂದು ಸೊಗಸು ಎನ್ನುವ ಮೂಲಕ, ಭಾರತೀಯ ರಾಮಭಕ್ತರಿಗೆ ಪ್ರೀತಿಪಾತ್ರರಾಗಿದ್ದಾರೆ. ಆದರೆ ಈ ಕ್ರಿಕೇಟಿಗ ಕೂಡ ಭಾರತೀಯ ಅನ್ನೋದು ವಿಶೇಷ. ಸೌತ್ ಆಫ್ರಿಕಾದ ಕ್ರಿಕೇಟಿಗ ಕೇಶವ್ ಮಹಾರಾಜ್, ಈ ರೀತಿ ರಾಮ ಭಜನೆ ಮೆಚ್ಚಿದ್ದಾರೆ. ಅಲ್ಲದೇ, ಆಫ್ರಿಕಾ ಆಟಗಾರ ಕಣಕ್ಕಿಳಿಯವಾಗ, ರಾಮ ಸಿಯಾ ರಾಮ್ ಹಾಡು ಕೇಳಿ ಬಂದರೆ, ಆ ವೇಳೆ ಮೈದಾನಕ್ಕೆ ಬರುವುದು ಕೇಶವ್ ಮಹಾರಾಜ್ ಅಂತಾ ನಾವು ತಿಳಿಯಬೇಕು.

ಭಾರತೀಯ ಕ್ರಿಕೇಟ್ ಪ್ಲೇಯರ್ ಕೆ.ಎಲ್.ರಾಹುಲ್ ಈ ಬಗ್ಗೆ ಕೇಶವ್ ಬಳಿ ಪ್ರಶ್ನಿಸಿದ್ದರು. ನೀವು ಬರುವಾಗ ರಾಮ್ ಸಿಯಾ ರಾಮ್ ಹಾಡು ಹಾಕುತ್ತಾರಲ್ಲಾ ಯಾಕೆ ಎಂದು ಪ್ರಶ್ನಿಸಿದ್ದರು. ಅದಕ್ಕೆ ಕೇಶವ್, ನನಗೂ ರಾಮ ಭಜನೆ ಕೇಳಿದಾಗ ಖುಷಿಯಾಯಿತು. ಅಲ್ಲದೇ ನಾನು ಇನ್ನುಮುಂದೆ ಮೈದಾನಕ್ಕೆ ಬರುವಾಗ, ಇದೇ ಹಾಡನ್ನು ಹೇಳಬೇಕು ಎಂದು ಮನವಿ ಮಾಡಿದ್ದೇನೆ ಎಂದಿದ್ದಾರೆ.

ನನಗೆ ಆರ್ಸಿಬಿ ಪರ ಆಡಲು ಇಷ್ಟವಿಲ್ಲದಿದ್ದರೂ ಬ್ಲಾಕ್ಮೇಲ್ ಮಾಡಿ ಆಡಿಸಿದರು: ಪ್ರವೀಣ್ ಕುಮಾರ್

ಕ್ರಿಕೇಟಿಗ ಮೊಹಮ್ಮದ್ ಶಮಿಗೆ ಅರ್ಜುನ ಪ್ರಶಸ್ತಿ

ಭಜರಂಗ್ ಪುನಿಯಾ ಬೆನ್ನಲ್ಲೇ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಕುಸ್ತಿಪಟು ವೀರೇಂದ್ರ ಸಿಂಗ್

- Advertisement -

Latest Posts

Don't Miss