Sunday, September 15, 2024

Latest Posts

ಅದ್ದೂರಿ ದಸರಾ ಆಚರಣೆ ಬಗ್ಗೆ ಸಚಿವರ ಗೊಂದಲಕಾರಿ ಹೇಳಿಕೆ..!

- Advertisement -

ಕರ್ನಾಟಕ ಟಿವಿ :  ರಾಜ್ಯ ರಾಜಕೀಯ ಹೈಡ್ರಾಮಾ, ನೆರೆ ಹಿನ್ನೆಲೆ ಈ ಬಾರಿಯ ಮೈಸೂರು ದಸರಾ ಅದ್ದೂರಿ ಆಚರಣೆ ಬಗ್ಗೆ ಭಾರೀ ಗೊಂದಲ ಇತ್ತು. ನೆರೆಯಿಂದ ಲಕ್ಷಾಂತರ ಜನ ಮನೆ ಕಳೆದುಕೊಂಡಿರುವ ವೇಳೆ ಅದ್ದೂರಿ ದಸರಾ ಬೇಕಾ ಅನ್ನೋ ಚರ್ಚೆ ಬೆನ್ನಲ್ಲೇ ಮೈಸೂರು ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿಕೆ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.

ಕಡಿಮೆ ವೆಚ್ಚದಲ್ಲಿ ಅದ್ದೂರಿ ದಸರಾ ಮಾಡ್ತೇವೆ – ವಿ ಸೋಮಣ್ಣ

ನಾವು ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ಮಾಡ್ತೇವೆ. ಅದು ಕಡಿಮೆ ಖರ್ಚಿನಲ್ಲಿ ಅಂತ ಗೊಂದಲಕಾರಿ ಹೇಳಿಕೆ ನೀಡಿದ್ದಾರೆ.. ಹಣ ಖರ್ಚು ಮಾಡಿದ್ರೆ ಅದ್ದೂರಿ ತನ ಕಾಣುತ್ತೆ. ಆದ್ರೆ, ಕಡಿಮೆ ಖರ್ಚಿನಲ್ಲಿ ಹೇಗೆ ಅದ್ದೂರಿಯಾಗಿ ದಸರಾ ಆಚರಣೆ ಮಾಡ್ತಾರೆ..? ಸಚಿವ ಸೋಮಣ್ಣ ಹೇಳಿಕೆ ದಸರಾಗೆ ಪ್ರತೀ ಬಾರಿಯಂತೆ ಖರ್ಚುಮಾಡುವ ಹಣಕ್ಕಿಂತ ಕಡಿಮೆ ವೆಚ್ಚ ಮಾಡ್ತಾರೆ ಅನ್ನೋದು ಕನ್ಫರ್ಮ್ ಆಗಿದೆ.

 ನಿಮ್ಮ ಪ್ರಕಾರ ಅದ್ದೂರಿ ದಸರಾ ಆಚರಿಸಬೇಕಾ..? ಇಲ್ಲಾ ಸರಳ ದಸರಾ ಆಚರಣೆ ಸಾಕಾ..? ಸಚಿವರು ಹೇಳಿದಂತೆ ಕಡಿಮೆ ವೆಚ್ಚದಲ್ಲಿ ಅದ್ದೂರಿ ದಸರಾ ಸಾಧ್ಯನಾ..? ಈ ಬಗ್ಗೆ ಕಾಮೆಂಟ್ ಮಾಡಿ.

- Advertisement -

Latest Posts

Don't Miss