ಕುಸ್ತಿ ಅಖಾಡದಲ್ಲಿ ಪಟ್ಟು, ಬಾಕ್ಸಿಂಗ್ ರಿಂಗ್ ನಲ್ಲಿ ಪಂಚು .. ಯಸ್ ಈ ಎರಡು ಪದ ಕೇಳಿದ್ರೆ ಸಾಕು ನೆನಪಾಗೋದು ಒಂದೇ.. ಅದು ಪೈಲ್ವಾನ್… ಹೌದು ಬಾದ್ ಷಾ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೈಲ್ವಾನ್, ಕುಸ್ತಿಯ ಪಟ್ಟು, ಬಾಕ್ಸಿಂಗ್ ನ ಪಂಚು ಎರಡನ್ನೂ ಒಟ್ಟೊಟ್ಟಿಗೆ ನೀಡುವುದೇ ಪೈಲ್ವಾನ್ ಸ್ಪೆಶಲ್. ಸದ್ಯ ಸಿನಿಮಾದ ಪವರ್ ಪುಲ್ ಟ್ರೈಲರ್ ರಿಲೀಸ್ ಆಗಿದೆ. ನಿನ್ನೆಯೇ ಈ ವಿಷಯವನ್ನ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ರು, ಹಾಗಾಗಿ ಇಂದು ಬೆಳಿಗ್ಗೆ ಯಿಂದಲೇ ಅಭಿಮಾನಿಗಳು ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ರು. ಅಭಿಮಾನಿಗಳ ಆ ನಿರೀಕ್ಷೆ ಸುಳ್ಳಾಗಲಿಲ್ಲ. ಟ್ರೈಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಗಳನ್ನ ದಾಟಿ ಮಿಲಿಯನ್ ನತ್ತ ದಾಪುಗಾಲಿಟ್ಟಿದೆ. ಇನ್ನೂ ಟ್ರೈಲರ್ ಬಗ್ಗೆ ಮಾತಾಡೊಹಾಗೆ ಇಲ್ಲ. ಜಬರ್ದಸ್ತ ಕುಸ್ತಿ, ಬಿಂದಾಸ್ ಬಾಕ್ಸಿಂಗ್ ಫುಲ್ ಹೈ
“ಬಲ ಇದೆ ಅಂತಾ ಹೊಡೆದಾಡೋನು ರೌಡಿ, ಆದ್ರೆ ಬಲವಾದ ಕಾರಣಕ್ಕೆ ಹೊಡೆದಾಡೋನು ಯೋಧ ಅನ್ನೋ ಪಂಚಿಂಗ್ ಡೈಲಾಗ್” ಪೈಲ್ವಾನನ ತಾಕತ್ತು ಏನು ಅನ್ನೋದನ್ನು ಸಾರಿ ಸಾರಿ ಹೇಳ್ತಿದೆ. ಅಷ್ಟೇ ಅಲ್ಲದೇ..
” ನಮ್ಮ ಕಿಚ್ಚ ಅಖಾಡಕ್ಕಿಳಿದಾ ಅಂದ್ರೆ….ಸಿಂಹ ಸಾರ್ ಸಿಂಹ… ” ಅನ್ನೊ ಡೈಲಾಗ್, ಟ್ರೈಲರ್ ಗೆ ಮಾಸ್ ಲುಕ್ ನೀಡಿದ್ರೆ, “ದೇವರು ಎಲ್ರಿಗೂ ಕನಸ್ಗಳನ್ನ ಕೊಟ್ಟಿರ್ತಾನೆ. ಆದ್ರೆ ಹಸಿವು ಎಲ್ಲ ಕನಸ್ಗಳನ್ನ ತಿಂದಾಕ್ಕೊಂಡಬಿಡುತ್ತೆ” ಅನ್ನೋ ಡೈಲಾಗ್, ಪೈಲ್ವಾನ್ ಬರಿ ಮಾಸ್ ಮೂವಿ ಅಲ್ಲ, ಕ್ಲಾಸ್ ಮೂವಿನೂ ಹೌದು ಎನ್ನುವಂತಿದೆ. ಅದೇನೇ ಇರಲಿ…. ಕಿಚ್ಚ ಸುದೀಪ್ ಮೊದಲ ಬಾರಿಗೆ ಕುಸ್ತಿ ಪಟುವಾಗಿ ಅಖಾಡದಲ್ಲಿ ಜಗಜಟ್ಟಿಮಲ್ಲನಂತೆ ಅಬ್ಬರಿಸೋದನ್ನ ಟ್ರೈಲರ್ನಲ್ಲಿ ಕಾಣಬಹುದು. ಈ ವೇಳೆ ಮೆಂಟರ್ ಆಗಿ ಸುನೀಲ್ ಶೆಟ್ಟಿ ಪೈಲ್ವಾನನಿಗೆ ಸಾಥ್ ನೀಡಿದ್ದಾರೆ. ಚಿತ್ರದ ಮೇಕಿಂಗ್ ಮತ್ತು ಕ್ಯಾಮೆರಾ ವರ್ಕ್ ಗಮನ ಸೆಳೆಯುತ್ತದೆ. ಇನ್ನು ಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದಿರುವ
ಪೈಲ್ವಾನ್ ಅಬ್ಬರ, ಇದೇ ಸೆಪ್ಟಂಬರ್ 12 ರಿಂದ ಶುರುವಾಗ್ತಿದ್ದು ಇಂದು ಬಿಡುಗಡೆಯಾಗಿರುವ ಟ್ರೈಲರ್ ಸಿನಿ ರಸಿಕರ ನಿರೀಕ್ಷೆಯನ್ನ ಹಿಮ್ಮಡಿಗೊಳಿಸಿದೆ.