Spiritual: ಕರ್ನಾಟಕದಲ್ಲಿ ಸರ್ಪದೋಷಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವ ಹಲವು ದೇವಸ್ಥಾನಗಳಿದೆ. ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ಹೀಗೆ ಹಲವು ದೇವಸ್ಥಾನಗಳು ಸರ್ಪದೋಷ ನಿವಾರಣೆಗಾಗಿಯೇ ಪ್ರಸಿದ್ಧವಾಗಿದೆ.
ಆದರೆ ನೀವು ಸರ್ಪದೋಷ ನಿವಾರಣೆಗೆ ಈ ದೇವಸ್ಥಾನದ ಜೊತೆ, ಮಂಗಳೂರಿನಲ್ಲಿರುವ ಪ್ರಸಿದ್ಧ ದೇವಸ್ಥಾನಕ್ಕೂ ಹೋಗಬಹುದು. ಯಾವುದು ಆ ದೇವಸ್ಥಾನ ಅಂತೀರಾ..? ಅದೇ ಕುಡುಪು ಶ್ರೀ ಅನಂತ್ ಪದ್ಮನಾಭ ದೇವಸ್ಥಾನ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕುಡುಪು ಎಂಬಲ್ಲಿ ಈ ಅನಂತ ಪದ್ಮನಾಭ ದೇವಸ್ಥಾನವಿದೆ. ಇಲ್ಲಿಯೂ ನಾಗಬನ, ಹುತ್ತ ಎಲ್ಲವೂ ಇದೆ. ನಾಗಪಂಚಮಿಯ ದಿನ ಮತ್ತು ಹಲವು ವಿಶೇಷ ದಿನಗಳಲ್ಲಿ ಇಲ್ಲಿ ಅನಂತ ಪದ್ಮನಾಭನಿಗೆ ವಿಶೇಷ ಪೂಜೆ ಸಲ್ಲುತ್ತದೆ.
ಸರ್ಪದೋಷವಿದ್ದವರು, ಇಲ್ಲಿ ಆಶ್ಲೇಷ ಬಲಿ ಮಾಡಿಸುತ್ತಾರೆ. ಜಾತಕ ನೋಡಿದಾಗ ನಮ್ಮಲ್ಲಿ ಸರ್ಪದೋಷವಿದ್ದರೆ, ಅದರ ಪರಿಹಾರವಾಗಿ ಆಶ್ಲೇಷ ಬಲಿ ಮಾಡಿಸಬೇಕು ಎಂದು ಹೇಳಲಾಗುತ್ತದೆ. ಇದಕ್ಕೇನಾದರೂ ನೀವು ಪರಿಹಾರ ಮಾಡಿಕೊಳ್ಳದೇ ಇದ್ದಲ್ಲಿ, ವಿವಾಹದಲ್ಲಿ, ಸಂತಾನದಲ್ಲಿ, ಉದ್ಯಮ, ಉದ್ಯೋಗ ಎಲ್ಲದರಲ್ಲಿಯೂ ಸಮಸ್ಯೆ ಬರಲಾರಂಭಿಸುತ್ತದೆ. ಮನೆಯ ನೆಮ್ಮದಿಯೂ ಹಾಳಾಗಬಹುದು. ಹಾಗಾಗಿ ಆಶ್ಲೇಷ ಬಲಿ ಮಾಡಿಸುವುದು ಮುಖ್ಯವಾಗಿದೆ.
ಮನೆಯಲ್ಲಿಯೂ ಆಶ್ಲೇಷ ಬಲಿ ಮಾಡಿಸಬಹುದು. ಆದರೆ ಅದಕ್ಕೆ ಹೆಚ್ಚು ಖರ್ಚಾಗುತ್ತದೆ. ಅಷ್ಟು ಹಣ ಖರ್ಚು ಮಾಡಲಾಗದಿದ್ದವರು, ಸರ್ಪದೇವರಿಗೆ ಸಂಬಂಧಿಸಿದ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಮಾಡಿಸುತ್ತಾರೆ. ಅದೇ ರೀತಿ ಕುಡುಪು ದೇವಸ್ಥಾನದಲ್ಲಿಯೂ ಆಶ್ಲೇಷ ಬಲಿ ಮಾಡಿಸಬಹುದು. 1 ಸಾವಿರ ರೂಪಾಯಿಯೊಳಗೆ ಆಶ್ಲೇಷ ಬಲಿ ಮಾಡಬಹುದು.
ಆದರೆ ಕೆಲ ದಿನಗಳ ಮುಂಚೆ ನೀವು ಇಲ್ಲಿ ಬುಕಿಂಗ್ ಮಾಡಿಸಬೇಕಾಗುತ್ತದೆ. ಏಕೆಂದರೆ, ಇಲ್ಲಿ ಪ್ರತಿದಿನ ಆಶ್ಲೇಷ ಬಲಿ ನಡೆಯುತ್ತದೆ. ಏಕಾದಶಿ ಮತ್ತು ವಾರ್ಷಿಕ ಉತ್ಸವ ಇರುವ ಸಮಯದಲ್ಲಿ ಮಾತ್ರ, ಆಶ್ವೇಷ ಬಲಿ ಮಾಡುವುದಿಲ್ಲ. ಉಳಿದ ದಿನವೆಲ್ಲ ಆಶ್ಲೇಷ ಬಲಿ ಮಾಡಲಾಗುತ್ತದೆ. ಕುಡುಪು ಅನಂತ್ ಪದ್ಮನಾಭ ದೇವಸ್ಥಾನದಲ್ಲಿ ದೊಡ್ಡ ಸರ್ಪದ ಹುತ್ತ, ನಾಗಬನ, ಸರಸ್ವತಿ ಕಲ್ಯಾಣಿ ಇದೆ. ಇಲ್ಲಿ ಶುಭಕಾರ್ಯಗಳನ್ನು ನಡೆಸಲು, ಕಲ್ಯಾಣ ಮಂಟಪವೂ ಇದೆ. ಈ ದೇವಸ್ಥಾನದ ಸ್ಥಳ ಪುರಾಣವನ್ನು ಮುಂದಿನ ಭಾಗದಲ್ಲಿ ತಿಳಿಯೋಣ.