Wednesday, September 11, 2024

Latest Posts

Famous Temple: ಸರ್ಪದೋಷವಿದ್ದವರು ಮಂಗಳೂರಿನ ಈ ದೇವಸ್ಥಾನಕ್ಕೂ ಭೇಟಿ ಕೊಡಬಹುದು ನೋಡಿ: ಭಾಗ 2

- Advertisement -

Spiritual: ಇದರ ಮೊದಲ ಭಾಗದಲ್ಲಿ ನಾವು ನಿಮಗೆ ಕುಡುಪು ದೇವಸ್ಥಾನದ ಬಗ್ಗೆ ಹೇಳಿದ್ದೆವು. ಇದೀಗ, ಈ ದೇವಸ್ಥಾನದ ಸ್ಥಳ ಪುರಾಣವನ್ನು ತಿಳಿಯೋಣ.

ಇದರ ಇತಿಹಾಸ ತಿಳಿಯುವುದಾದರೆ, ಕೇದಾರ ಎಂಬ ಬ್ರಾಹ್ಮಣ ವ್ಯಕ್ತಿಗೆ ಸಂತಾನವಿರುವುದಿಲ್ಲ. ಶೃಂಗಮುನಿ ಎಂಬುವವರು ಕೇದಾಾರರಿಗೆ ಸರಸ್ವತಿ ತೀರ್ಥದ ಬಳಿ ಹೋಗಿ, ದೇವರನ್ನು ಧ್ಯಾನಿಸಿ. ಆತ ನಿಮಗೆ ಸಂತಾನ ಭಾಗ್ಯ ನೀಡುತ್ತಾನೆಂದು ಹೇಳುತ್ತಾರೆ.

ಕೇದಾರರು ಭಕ್ತಿಯಿಂದ ಸುಬ್ರಹ್ಮಣ್ಯ ದೇವರನ್ನು ನೆನೆದು, ಪ್ರಾರ್ಥಿಸುತ್ತಾರೆ. ದೇವರು ತಂದೆಯಾಾಗುವಂತೆ ವರವನ್ನು ನೀಡುತ್ತಾರೆ. ಅದೇ ವರ್ಷದಲ್ಲಿ ಕೇದಾರರ ಪತ್ನಿ ಗರ್ಭವತಿಯಾಗುತ್ತಾರೆ. ಆದರೆ ಕೇದಾರರ ಜೀವನದಲ್ಲಿ ಅವರು ತಂದೆಯಾಗುವುದಿಲ್ಲವೆಂದು ಬರೆದಿರುತ್ತದೆ.

ಆದರೆ ಸುಬ್ರಹ್ಮಮಣ್ಯ ಸ್ವಾಮಿ ವರ ನೀಡಿದ್ದರಿಂದ, ಕೇದಾರರ ಪತ್ನಿ ಗರ್ಭದಿಂದ ಮೂರು ಸರ್ಪದ ಮೊಟ್ಟೆಗಳು ಬರುತ್ತದೆ. ಇದನ್ನು ನೋಡಿ ಕೇದಾರರಿಗೆ ಬೇಸರವಾಗುತ್ತದೆ. ಮಕ್ಕಳನ್ನು ಕೊಡು ಎಂದರೆ, ದೇವರು ಸರ್ಪದ ಮೊಟ್ಟೆ ಕೊಟ್ಟಿದ್ದಾನೆಂದು ಬೇಸರ ಪಡುತ್ತಾರೆ.

ಆಗ ಆಕಾಶವಾಣಿಯೊಂದು ಕೇಳಿಬರುತ್ತದೆ. ಆ ಮೂರು ಮೊಟ್ಟೆಯೊಳಗಿರುವ ಸರ್ಪವು ಮಹಾವಿಷ್ಣು, ಸುಬ್ರಹ್ಮಣ್ಯ, ಶೇಷನ ರೂಪವಾಗಿ, ಲೋಕ ಕಲ್ಯಾಣಕ್ಕಾಗಿ, ಕೇದಾರರ ಪತ್ನಿಯ ಗರ್ಭದ ಮೂಲಕ ಭೂಮಿಗೆ ಬಂದಿದೆ. ಹಾಗಾಗಿ ಈ ಅಂಡವನ್ನು ಇದೇ ಸರಸ್ವತಿ ಕಲ್ಯಾಣಿಯ ತಟದಲ್ಲಿ ಪ್ರತಿಷ್ಠಾಪಿಸಿ, ಅನಂತ್‌ ಪದ್ಮನಾಭನನ್ನು ಪೂಜಿಸಿದರೆ, ಕೇದಾರರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಆಕಾಶವಾಣಿ ಹೇಳುತ್ತದೆ.

ಅದರಂತೆ ಕೇದಾರರು ಸರಸ್ವತಿ ನದಿ ತಟದಲ್ಲಿ, ಬಿದಿರಿನ ಬುಟ್ಟಿಯಲ್ಲಿ ಮೂರು ಅಂಡಗಳನ್ನು ಇಟ್ಟು ಪ್ರತಿಷ್ಠಾಪಿಸುತ್ತಾರೆ. ಮತ್ತು ಬಿದಿರಿನ ಬುಟ್ಟಿಯನ್ನೇ ಕುಡುಪು ಎನ್ನಲಾಗುತ್ತದೆ. ಹಾಗಾಗಿ ಈ ಕ್ಷೇತ್ರಕ್ಕೆ ಕುಡುಪು ಎಂದು ಹೆಸರು ಬಂತು.

ಇನ್ನು ಕೇದಾರರು ಯಾವ ಸ್ಥಳದಲ್ಲಿ ಅಂಡಗಳನ್ನು ಪ್ರತಿಷ್ಠಾಪಿಸಿದ್ದರೋ, ಆ ಸ್ಥಳದಲ್ಲಿ ಹುತ್ತ ಬೆಳೆದಿದೆ. ಇಲ್ಲಿಯೇ ಕೇದಾರರು ನಂತ ಪದ್ಮನಾಭನಿಗೆ ಪೂಜೆ ಸಲ್ಲಿಸುತ್ತ ಒಂದು ದಿನ ಮುಕ್ತಿ ಹೊಂದುತ್ತಾರೆ. ಬಳಿಕ ಈ ಕ್ಷೇತ್ರ, ಭಕ್ತರ ಬೇಡಿಕೆ ಈಡೇರಿಸುವ ಶ್ರೀಕ್ಷೇತ್ರವಾಗಿ ಪ್ರಸಿದ್ಧಿ ಹೊಂದುತ್ತದೆ. ಕುಡುಪಿಗೆ ಬಂದು ಯಾರು ಸರ್ಪದೋಷಕ್ಕಾಗಿ ಪೂಜೆ, ಆಶ್ಲೇಷ ಬಲಿ ನಡೆಯುತ್ತಾರೋ, ಅಂಥವರು ಸದಾ ಕಾಲ ನೆಮ್ಮದಿಯಿಂದ ಇದ್ದಾರೆ. ಈ ದೇವರನ್ನು ನಂಬಿದವರಿಗೆ ಎಲ್ಲವೂ ಒಳ್ಳೆಯದೇ ಆಗಿದೆ.

- Advertisement -

Latest Posts

Don't Miss