ಕೇರಳ ಮೂಲದ ಬಾಲಕಿ, ತನ್ನ ಹುಟ್ಟುಹಬ್ಬದ ದಿನವೇ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕತಾರ್ ಕಿಂಡರ್‌ಗಾರ್ಡೆನ್ ಒಂದರಲ್ಲಿ ಈ ಘಟನೆ ನಡೆದಿದ್ದು, ಶಾಲಾ ಬಸ್‌ನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಹೀಗಾಗಿ ಅಲ್ಲಿನ ಕಿಂಡರ್ ಗಾರ್ಡೆನ್‌ನನ್ನು ಬಂದ್ ಮಾಡಲಾಗಿದೆ.
4 ವರ್ಷದ ಮಿನ್ಸ್ ಮರಿಯಮ್ ಜಾಕೋಬ್ ಸಾವನ್ನಪ್ಪಿದ ಬಾಲಕಿಯಾಗಿದ್ದು, ಅಭಿಲಾಷ್ ಮತ್ತು ಸೌಮ್ಯಾ ದಂಪತಿಯ ಕಿರಿಯ ಮಗಳಾಗಿದ್ದಾಳೆ. ಸೌಮ್ಯಾ ಕತಾರ್ ವಿಶ್ವಕಪ್ ಸಮಿತಿಯಲ್ಲಿ ಹಿರಿಯ ಗ್ರಾಫಿಕ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಇವರ ಕುಟುಂಬ ಕತಾರ್‌ನಲ್ಲಿ ವಾಸವಾಗಿತ್ತು. ಮಗುವನ್ನು ಪ್ರತಿ ದಿನ ಕಿಂಡರ್ ಗಾರ್ಡೆನ್‌ನ ಕಳುಹಿಸಿಕೊಡಲಾಗುತ್ತಿತ್ತು.
ಆದ್ರೆ ಸೆಪ್ಟೆಂಬರ್ 11ರಂದು ಮಗುವಿನ ಹುಟ್ಟುಹಬ್ಬವಾಗಿದ್ದು, ಮಗು ಖುಷಿ ಖುಷಿಯಿಂದಲೇ ಶಾಲೆಯ ಬಸ್ ಹತ್ತಿದೆ. ಆದ್ರೆ ಆಕೆ ನಿದ್ದೆ ಮಾಡಿದ್ದ ಪರಿಣಾಮವಾಗಿ, ಆಕೆಯ ಶಾಲಾ ಸಿಬ್ಬಂದಿ ಗಮನಿಸಿಲ್ಲ. ಉಳಿದ ಮಕ್ಕಳನ್ನು ಇಳಿಸಿ, ಕಿಂಡರ್ ಗಾರ್ಡೆನ್‌ಗೆ ಕರೆದುಕೊಂಡು ಹೋಗಿದ್ದಾರೆ. ಹಾಗೆ ಹೋಗುವಾಗ ಬಸ್‌ನ್ನು ಲಾಕ್ ಮಾಡಿ ಹೋಗಿದ್ದಾರೆ. ಯಾವ ಕಿಟಕಿ ಕೂಡ ಓಪೆನ್ ಇರಲಿಲ್ಲ. ಇನ್ನು ನಿದ್ದೆಗೆ ಜಾರಿದ್ದ ಮಗು 4 ಗಂಟೆಗಳ ಕಾಲ ಬಸ್‌ನಲ್ಲಿ ಉಳಿದಿದ್ದ ಪರಿಣಾಮ, ಉಸಿರಾಡಲು ತೊಂದರೆಯಾಗಿ, ಸಾವನ್ನಪ್ಪಿದೆ.
ನಿರ್ಲಕ್ಷ್ಯ ಮಾಡಿದ ಮೂರು ಸಿಬ್ಬಂದಿಯನ್ನು ಕೆಲಸದಿಂದ ಕಿತ್ತು ಹಾಕಿ, ಅರೆಸ್ಟ್ ಮಾಡಲಾಗಿದೆ. ಅಲ್ಲದೇ, ಆ ಕಿಂಡರ್ ಗಾರ್ಡೆನ್‌ನ್ನನು ಕತಾರ್‌ನ ಶಿಕ್ಷಣ ಸಚಿವಾಲಯದ ಆದೇಶದ ಮೇರೆಗೆ ಬಂದ್ ಮಾಡಲಾಗಿದೆ. ಇನ್ನು ಮಗುವಿನ ಪಾರ್ಥೀವ ಶರೀರ ಕೇರಳ ತಲುಪಿದ್ದು, ಅಂತ್ಯಕ್ರಿಯೆ ನಡೆಸಲಾಗಿದೆ.