Wednesday, November 29, 2023

Latest Posts

ಬೆಡ್ ರೂಂನ ಹಾಸಿಗೆ ಮೇಲೆ ಪ್ರತ್ಯಕ್ಷವಾಯ್ತು ಹುಲಿ..!

- Advertisement -

ಅಸ್ಸಾಂ: ಭಾರೀ ಮಳೆಯಿಂದ ಪ್ರವಾಹಕ್ಕೆ ತುತ್ತಾಗಿರುವ ಅಸ್ಸಾಂನಲ್ಲಿ ಸುಮಾರು 43 ಲಕ್ಷ ಮಂದಿ ನಲೆ ಕಳೆದುಕೊಂಡಿದ್ದಾರೆ. ಅಲ್ಲದೆ ವಿಶ್ವವಿಖ್ಯಾತ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೂ ಪ್ರವಾಹದ ಬಿಸಿ ತಟ್ಟಿದ್ದು, ನೂರಾರು ಪ್ರಾಣಿ ಪಕ್ಷಿಗಳು ಸಾವನ್ನಪ್ಪಿವೆ. ಪ್ರವಾಹದಿಂದ ಕಂಗಾಲಾದ ಹುಲಿಯೊಂದು, ಆಹಾರ ಸಿಗದೆ ಕೊನೆಗೆ ನಗರ ಪ್ರದೇಶದತ್ತ ಮುಖ ಮಾಡಿದೆ. ಅಲ್ಲದೇ ಮನೆಯೊಂದರ ಬೆಡ್ ರೂಮ್ ಪ್ರವೇಶಿಸಿದ ಹುಲಿ, ನೇರವಾಗಿ ಹಾಸಿಗೆ ಮೇಲೆ ವಿಹರಿಸಿದ್ದು ಕಂಡುಬಂದಿದೆ.

ಕಾಜಿರಂಗಾ ರಾಷ್ಟ್ರೀಯ ಉದ್ಯಾನವದ ಶೇ 95ರಷ್ಟು ಭಾಗ ಪ್ರವಾಹಪೀಡಿತವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ವಾಸಿಸುವ ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿವೆ. ನೀರಾನೆಗಳಿಗೆ ಹೆಸರುವಾಸಿಯಾದ ಈ ಉದ್ಯಾನವನದಲ್ಲಿ ಜಿಂಕೆ, ಕಡವೆ, ನವಿಲು, ಜಿರಾಫೆ, ಆನೆ, ಹುಲಿ ಸೇರಿದಂತೆ ಇನ್ನೂ ಅನೇಕ ಪ್ರಾಣಿಗಳ ಆಶ್ರಯ ತಾಣ. ಆದ್ರೆ ರಣ ಪ್ರವಾಹಕ್ಕೆ ಬೆಚ್ಚಿಬಿದ್ದ ಪ್ರಾಣಿಗಳು ತಪ್ಪಿಸಿಕೊಂಡು ಬೇರೆಡೆಗೆ ಸ್ಥಳಾಂತರಗೊಂಡರೆ, ನೀರಿನಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ನೂರಾರು ಪ್ರಾಣಿಗಳನ್ನು ರಕ್ಷಣೆ ಮಾಡಲಾಗುತ್ತಿದೆ.

ಈ ಮಧ್ಯೆ ಕಾಜಿರಂಗಾ ಉದ್ಯಾನವನದ ಪ್ರದೇಶದಿಂದ ಹುಲಿಯೊಂದು ತಪ್ಪಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮನೆಯೊಂದರ ಬೆಡ್ ರೂಮ್ ಗೆ ನುಗ್ಗಿ ಅಲ್ಲೇ ಕೆಲಹೊತ್ತು ವಿಹರಿಸಿತು. ಇದನ್ನು ಕಂಡ ಮನೆಯವರು ಕೂಡಲೇ ರೂಮ್ ನ ಬಾಗಿಲು ಹಾಕಿದ್ದರಿಂದ ದುರಂತ ತಪ್ಪಿದಂತಾಗಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಹರಸಾಹಸ ಪಟ್ಟು ಹುಲಿಯನ್ನು ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest Posts

Don't Miss