ಚಂದಕಾಣಿಸಬೇಕು. ನಮ್ಮ ಮುಖವೂ ಬೆಳ್ಳಗೆ, ಹೊಳಪು ಹೊಂದಿದ್ದಾಗಿರಬೇಕು ಅಂತಾ ಯಾರೂ ತಾನೇ ಬಯಸೋದಿಲ್ಲಾ ಹೇಳಿ. ಯುವಕ- ಯುವತಿಯರಿಗಂತೂ ಇದರದ್ದೇ ಚಿಂತೆಯಾಗಿರುತ್ತದೆ. ಯಾಕಂದ್ರೆ ಯುವ ಪೀಳಿಗೆಯವರಿಗೆ ಮೊಡವೆಯ ಪ್ರಾಬ್ಲ್ಂ ಹೆಚ್ಚಾಗಿರುತ್ತದೆ. ಹಾಗಾಗಿ ಗುಳ್ಳೆ, ಅವುಗಳ ಕಲೆಯಿಂದ ಬೇಸತ್ತ ಯುವ ಪೀಳಿಗೆ ಪ್ರತಿದಿನ ಒಂದಲ್ಲ ಒಂದು ರೀತಿಯ ಕ್ರೀಮ್, ಫೇಸ್‌ವಾಶ್ ಜೆಲ್‌ಗೆ ಮೊರೆ ಹೋಗುತ್ತಲಿರುತ್ತದೆ. ಆದ್ರೆ ನಾವಿಂದು ಹೇಳುವ ಕೆಲ ಟಿಪ್ಸ್ ಫಾಲೋ ಮಾಡಿದ್ರೆ ಸಾಕು. ನಿಮ್ಮ ತ್ವಚೆ ಹೊಳಪಿನಿಂದ ಕೂಡಿರುತ್ತದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಮೊದಲನೇಯದಾಗಿ ನಿಮಗೆ ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯೋಕ್ಕೆ ಟ್ರೈ ಮಾಡಿ. ದಿನಕ್ಕೆ ಎರಡರಿಂದ ಮೂರು ಲೀಟರ್ ನೀರಂತೂ ನೀವು ಕುಡಿಯಲೇಬೇಕು. ಆಗ ನಿಮ್ಮ ತ್ವಚೆ ಹೊಳಪಿನಿಂದ ಕೂಡಿರುವುದಲ್ಲದೇ, ಕೂದಲು ಉದುರುವ ಸಮಸ್ಯೆಗೂ ಕೂಡ ಮುಕ್ತಿ ದೊರಕುತ್ತದೆ. ಉದಾಹರಣೆಗೆ ನಾವು ಗಿಡಕ್ಕೆ ನೀರು ಹಾಕದಿದ್ದಾಗ, ಅದು ಒಣಗಲು ಶುರುವಾಗುತ್ತದೆ. ಅದೇ ರೀತಿ ನಮ್ಮ ದೇಹಕ್ಕೆ ಸಮಮ ಪ್ರಮಾಣದ ನೀರು ಸಿಗದಿದ್ದಾಗ, ನಮ್ಮ ದೇಹದಲ್ಲಿರುವ ಕೆಲ ಅಂಶಗಳು ಕೂಡ ಒಣಗಲು ಶುರುವಾಗುತ್ತದೆ. ಆಗಲೇ ಮುಖದಲ್ಲಿ ರಿಂಕಲ್ಸ್ ಬರುವುದು. ಹೀಗಾಗಿ ಚೆನ್ನಾಗಿ ನೀರು ಕುಡಿಯಬೇಕು. ಆದ್ರೆ ಮುಖ್ಯವಾದ ವಿಷಯ ನೆನಪಿಟ್ಟುಕೊಳ್ಳಿ. ನೀವು ನೀರು ಕುಡಿದಂತೆ ಅದು ಮೂತ್ರದ ಮೂಲಕ ಹೋಗುತ್ತದೆಯೋ ಇಲ್ಲವೋ ಅನ್ನುವುದನ್ನ ಗಮನಿಸಬೇಕು. ಯಾಕಂದ್ರೆ ಕೆಲವರಿಗೆ ನೀರು ಕುಡಿದು ಕುಡಿದು, ಮೂತ್ರವೂ ಹೋಗದೇ, ಹೊಟ್ಟೆ ಉಬ್ಬುವ ಸಂಭವವೂ ಆಗುತ್ತದೆ. ಹೀಗಾಗಿ ಜಾಗೃತೆ ವಹಿಸಿ.
ಊಟದಲ್ಲಿ ಹೆಚ್ಚು ಹಸಿರು ತರಕಾರಿ ಬಳಸಿ. ಪಾಲಕ್, ಬ್ರೋಕೋಲಿ, ಹರಿವೆ ಸೊಪ್ಪು, ಬಸಳೆ ಸೊಪ್ಪು, ಮೆಂತ್ಯೆ ಸೊಪ್ಪು, ಸಬ್ಬಸಿಗೆ, ಸೌತೇಕಾಯಿ, ನೆಲ್ಲಿಕಾಯಿ, ಸೇರಿ ಇನ್ನು ಹಲವು ತರಕಾರಿಗಳನ್ನ ನಿಮ್ಮ ಡಯಟ್ ಲೀಸ್ಟ್‌ನಲ್ಲಿ ಬಳಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೀಟ್‌ರೂಟ್ ಜ್ಯೂಸ್ ಕುಡಿದರೆ ನಿಮ್ಮ ಮುಖ ಹೊಳಪಿನಿಂದ ಕೂಡಿರುತ್ತದೆ. ಇನ್ನು ಕೆಲವರು ಮುಖಕ್ಕೆ ಕ್ಯಾಮಿಕಲ್‌ಯುಕ್ತ ಫೇಸ್‌ಪ್ಯಾಕ್ ಬಳಸುತ್ತಾರೆ. ಅಲ್ಲದೇ, ಸೋಪಿನಿಂದ ದಿನಕ್ಕೆ ನಾಲ್ಕೈದು ಬಾರಿ ಮುಖ ತೊಳೆಯುತ್ತಾರೆ. ಇದು ಅಕ್ಷರಶಃ ತಪ್ಪು. ಮುಖಕ್ಕೆ ಸೋಪನ್ನ ಹೆಚ್ಚಾಗಿ ಬಳಸಬಾರದು. ಇದರ ಬದಲು, ಕಡಲೆ ಹಿಟ್ಟು, ಮುಲ್ತಾನಿ ಮಿಟ್ಟಿ ಬಳಸಿ.