Thursday, November 27, 2025

Latest Posts

KRG Studios production ನ “ಹೊಯ್ಸಳ”ಚಿತ್ರದ ಶೀರ್ಷಿಕೆ ಅನಾವರಣ..!

- Advertisement -

ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣ(KRG Studios production) ಸಂಸ್ಥೆ ಇಂದು ತಮ್ಮ ಎರಡನೇ ಚಿತ್ರದ ಶೀರ್ಷಿಕೆಯನ್ನು ಅನಾವರಣ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆ “ಹೊಯ್ಸಳ”(Hoysala). ಇತ್ತೀಚಿನ ದಿನಗಳಲ್ಲಿ ಬಿಡುಗಡೆಗೊಂಡು ಅತ್ಯಂತ ಜನಪ್ರಿಯವಾದ, ಜನಮನ ಗೆದ್ದ ಚಿತ್ರ “ರತ್ನನ್ ಪ್ರಪಂಚ”(Rathnan Prapancha) ಚಿತ್ರದ ನಿರ್ಮಾಪಕರೇ ಆದ ಕಾರ್ತಿಕ್(Karthik)ಮತ್ತು ಯೋಗಿ.ಜಿ.ರಾಜ್(Yogi.G.Raj) ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಹೊಂಬಾಳೆ (Hombale)ಸಂಸ್ಥೆಯ ಸಂಸ್ಥಾಪಕರಾದ ವಿಜಯ್ ಕಿರಗಂದೂರ್(Vijay Kirgandur) ಅವರು ಈ ಚಿತ್ರವನ್ನು ಅರ್ಪಿಸುತಿದ್ದಾರೆ. ಚಿತ್ರದ ನಿರ್ದೇಶನದ ಜವಾಬ್ಧಾರಿಯನ್ನು ಈ ಹಿಂದೆ “ಗೀತಾ” ಚಿತ್ರ ನಿರ್ದೇಶಿಸಿದ್ದ ವಿಜಯ್ ಏನ್ ಅವರು ಹೊರಲಿದ್ದಾರೆ. ಈ ಚಿತ್ರಕ್ಕೆ ಸಂಗೀತವನ್ನು ದಕ್ಷಿಣ ಭಾರತದ ಬಹಳ ಯಶಸ್ಸಿ ಸಂಗೀತ ನಿರ್ದೇಶಕರಾದ ಎಸ್ .ಎಸ್ .ತಮನ್(S,S TAMAN) ಅವರು ನೀಡಲ್ಲಿದ್ದಾರೆ. ಈ ಚಿತ್ರಕ್ಕೆ ದೀಪು.ಎಸ್.ಕುಮಾರ್ ಸಂಕಲನ ಮಾಡಲ್ಲಿದ್ದಾರೆ. ವಿಶ್ವಾಸ್ ಕಶ್ಯಪ್  ಅವರು  ಕಲಾ ನಿರ್ದೇಶಕರಾಗಿದ್ದು ಮಾಸ್ತಿ ಅವರು ಈ ಚಿತ್ರಕ್ಕೆ ಸಂಭಾಷಣೆಯನ್ನು ಬರೆಯಲ್ಲಿದ್ದಾರೆ.

ಚಿತ್ರಕ್ಕೆ ಪಿ.ಆರ್.ಓ ಆಗಿ ಸುಧೀಂದ್ರ ವೆಂಕಟೇಶ್ ಅವರು ಕೈಜೋಡಿಸಲಿದ್ದಾರೆ. ಚಿತ್ರದ ಪ್ರಚಾರವನ್ನು ಕೆ.ಆರ್.ಜಿ ಕನೆಕ್ಟ್ಸ್ ಸಂಸ್ಥೆ ಮಾಡಲಿದೆ. ಈ ಚಿತ್ರದ ನಾಯಕ ನಟರಾಗಿ ಬಹುಮುಖಿ ಕಲಾವಿದರೆಂದು ಜನಮನ್ನಣೆ ಪಡೆದ ಧನಂಜಯ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಧನಂಜಯ ಅವರ ೨೫ ನೇ ಚಿತ್ರವೂ ಆಗಿದೆ. ಅವರಿಗೆ ವಯಕ್ತಿಕವಾಗಿ ಇದೊಂದು ದೊಡ್ಡ ಮೈಲಿಗಲ್ಲು. ಚಿತ್ರದ ಬಹುತೇಕ ಚಿತ್ರೀಕರಣ ಬೆಳಗಾವಿ ಜೆಲ್ಲೆಯ ಅನೇಕ ಭಾಗಗಳಲ್ಲಿ ನಡೆಯಲಿದೆ.  ಚಿತ್ರದ ಒಂದು ಚಿಕ್ಕ ಎಳೆ ಹೇಳಬೇಕೆಂದರೆ , ಬೆಳಗಾವಿಯಲ್ಲಿ ನಡೆಯುವ ಒಬ್ಬ ದಿಟ್ಟ ಪೊಲೀಸ್  ಅಧಿಕಾರಿಯ ಸುತ್ತ ಹೆಣೆದಿರುವ ಕಥೆ ಇದಾಗಿದೆ.

ಏಪ್ರಿಲ್ ತಿಂಗಳಿನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ . ಚಿತ್ರದಲ್ಲಿ ನಟಿಸಲಿರುವ ಎಲ್ಲ ಕಲಾವಿದರ ಆಯ್ಕೆಯನ್ನು  ಚಿತ್ರ ನಿರ್ಮಾಣ ತಂಡ ಮಾಡುತ್ತಿದ್ದು ,ಮುಂಬರುವ ದಿನಗಳಲ್ಲಿ ಅದನ್ನು ನಿಮ್ಮ ಮುಂದೆ ಹಂಚಿಕೊಳ್ಳಲ್ಲಿದ್ದಾರೆ. ತಮ್ಮೆಲ್ಲರ ಬೆಂಬಲ ಈ ಚಿತ್ರಕ್ಕೆ ಕೊಡಬೇಕಾಗಿ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್, ಮತ್ತು ಕೆ.ಆರ್.ಜಿ. ಸ್ಟುಡಿಯೋಸ್ ನಿರ್ಮಾಪಕರು ಮನವಿ ಮಾಡಿದರು.

- Advertisement -

Latest Posts

Don't Miss