ಸೋಶಿಯಲ್ ಮೀಡಿಯಾದಲ್ಲಿ ಬರುವ ಕೆಲ ವೀಡಿಯೋಗಳು, ಮನಸ್ಸಿಗೆ ನೆಮ್ಮದಿ ಕೊಟ್ರೆ, ಇನ್ನು ಕೆಲವು ವೀಡಿಯೋಗಳು ಬೇಸರ ತರಿಸುತ್ತದೆ. ಮತ್ತೆ ಕೆಲವು ವೀಡಿಯೋ ನಮಗೆ ನಗು ತರಿಸುತ್ತದೆ. ಆದ್ರೆ ನಾವಿಂದು ನಿಮಗೆ ತೋರಿಸಲಿರುವ ವೀಡಿಯೋ ನೋಡಿದ್ರೆ, ನಿಮ್ಮ ಎದೆ ಝಲ್ ಎನ್ನಲಿದೆ. ಅಷ್ಟು ಭಯಂಕರವಾಗಿದೆ ಈ ವೀಡಿಯೋ.
ಇಂಡಿಯನ್ ಫಾರೆಸ್ಟ್ ಸರ್ವಿಸ್ ಆಫೀಸರ್ ಸುಸಾಂತಾ ನಂದಾ ತಮ್ಮ ಟ್ವಿಟರ್ ಖಾತೆಯಲ್ಲಿ ಒಂದು ವೀಡಿಯೋ ಶೇರ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಕಪ್ಪು ಹೆಬ್ಬಾವು ಮೆಟ್ಟಿಲ ಬದಿಯಿಂದ ಗೋಡೆಗೆ ಹತ್ತುತ್ತಿದೆ. ಈ ವೀಡಿಯೋ ಅಪ್ಲೋಡ್ ಮಾಡಿರುವ ನಂದಾ, ಪ್ರತೀ ಬಾರಿಯೂ ಮೇಲಕ್ಕೆ ಹತ್ತಲು, ಮೆಟ್ಟಲಿನ ಅವಶ್ಯಕತೆ ಇಲ್ಲ ಎಂದು ಬರೆದುಕೊಂಡಿದ್ದಾರೆ.
ವೀಡಿಯೋ ಅಪ್ಲೋಡ್ ಮಾಡಿ, ಕೆಲವೇ ಗಂಟೆಯಲ್ಲಿ 10 ಸಾವಿರ ಜನ ವೀಡಿಯೋ ಕಂಡಿದ್ದು, 400ಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ತುಂಬಾ ಜನ ಶೇರ್ ಮಾಡಿದ್ದಾರೆ. ಇದಕ್ಕೆ ತರಹೇವಾರಿ ಕಾಮೆಂಟ್ಸ್ ಬಂದಿದ್ದು, ಕೆಲವರು ಈ ವೀಡಿಯೋ ಮಾಡಿದವನಿಗೆ ಎಷ್ಟು ಧೈರ್ಯವಿರಬಹುದು ಅಂತಾ ನಾನು ಯೋಚಿಸುತ್ತಿದ್ದೇನೆಂದು ಹೇಳಿದ್ದಾರೆ.
To go up,
One doesn’t need a staircase every time ☺️☺️ pic.twitter.com/UIix7uby89— Susanta Nanda (@susantananda3) October 17, 2022