ಇಂದು ನಡೆದ ಮೊದಲ ಸುತ್ತಿನ ಸಂಧಾನ ಮಾತುಕತೆಯಲ್ಲಿ ಯಾವುದೇ ಸ್ಪಷ್ಟ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಉಭಯ ರಾಷ್ಟ್ರಗಳು ಮತ್ತೊಮ್ಮೆ ಭೇಟಿಯಾಗಿ ಸಭೆ ನಡೆಸಲು ನಿರ್ಧರಿಸಿವೆ. ಬೆಲಾರಸ್‌ನ ಗಡಿ ಪಟ್ಟಣವಾದ ಗೋಮೆಲ್‌ನಲ್ಲಿ ನಡೆದ ಮೊದಲ ಸುತ್ತಿನಲ್ಲಿ ಐದು ಗಂಟೆಗಳವರೆಗೂ ಚರ್ಚೆ ನಡೆಸಲಾಗಿತ್ತು. ಮಾ.2ರಂದು ಉಕ್ರೇನ್-ರಷ್ಯಾ ಎರಡನೇ ಸುತ್ತಿನ ಶಾಂತಿ ಮಾತುಕತೆ ಮೊದಲ ಸುತ್ತಿನಲ್ಲಿ ರಷ್ಯಾ ಮತ್ತು ಉಕ್ರೇನ್ ಪ್ರತಿನಿಧಿಗಳು “ಕೆಲವು ವಿಷಯಗಳ ಬಗ್ಗೆ ಒಪ್ಪಿಕೊಂಡಿದ್ದಾರೆ” ಎಂದು ತೋರುತ್ತಿದೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಯುರೋಪಿಯನ್ ಯೂನಿಯನ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ನಂತರ ಈ ಬೆಳವಣಿಗೆಯಾಗಿದೆ. ತನ್ನ ಭಾಷಣದಲ್ಲಿ, ಝೆಲೆನ್ಸ್ಕಿ ಬ್ಲಾಕ್ನ ಎಲ್ಲಾ ದೇಶಗಳು ಹೇಗೆ ಏಕೀಕರಿಸಲ್ಪಟ್ಟವು ಎಂಬುದನ್ನು ಸೂಚಿಸಿದರು ಮತ್ತು ಉಕ್ರೇನ್ ಅದರ ಭಾಗವಾಗಲು ತನ್ನ ಬಯಕೆಯನ್ನು ವ್ಯಕ್ತಪಡಿಸಿದ್ದರು. ಉಕ್ರೇನ್ ಮತ್ತು ರಷ್ಯಾ ನಡುವಿನ ಮುಂದಿನ ಸುತ್ತಿನ ಮಾತುಕತೆಗಳು ಪೋಲೆಂಡ್-ಬೆಲಾರಸ್ ಗಡಿಯಲ್ಲಿ ನಡೆಯಲಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ. ಇದಕ್ಕೂ ಮೊದಲು ಉಕ್ರೇನ್‌ನೊಂದಿಗಿನ ಶಾಂತಿ ಮಾತುಕತೆಯಲ್ಲಿ ಎರಡೂ ಕಡೆಯ ಹಿತಾಸಕ್ತಿಗಳಿಗೆ ಅನುಗುಣವಾಗಿ ಒಪ್ಪಂದಕ್ಕೆ ಬರಲು ರಷ್ಯಾ ಆಸಕ್ತಿ ಹೊಂದಿದೆ ಎಂದು ರಷ್ಯಾದ ಸಮಾಲೋಚಕ ವ್ಲಾಡಿಮಿರ್ ಮೆಡಿನ್ಸ್ಕಿ ಹೇಳಿದ್ದರು. ಕೀವ್ ಕಡೆಗೆ ಮುಖ ಮಾಡಿ ನಿಂತ ರಷ್ಯಾ ಮಿಲಿಟರಿ: ಯುಎಸ್ ತಂತ್ರಜ್ಞಾನ ಸಂಸ್ಥೆ ಮ್ಯಾಕ್ಸರ್ ಟೆಕ್ನಾಲಜೀಸ್ ಸೋಮವಾರ ತೆಗೆದ ಉಪಗ್ರಹ ಚಿತ್ರಗಳಲ್ಲಿ ರಷ್ಯಾದ 64-ಕಿಲೋಮೀಟರ್ (40-ಮೈಲಿ) ಉದ್ದದ ಮಿಲಿಟರಿ ಬೆಂಗಾವಲು ಪಡೆ ಉಕ್ರೇನ್‌ನ ರಾಜಧಾನಿ ಕೀವ್ ಕಡೆಗೆ ಹೋಗುತ್ತಿರುವುದನ್ನು ತೋರಿಸಿದೆ. ರಷ್ಯಾದ ಮಿಲಿಟರಿ ಬೆಂಗಾವಲು ಪಡೆ ಕೀವ್‌ನ ಉತ್ತರದಿಂದ ಮುನ್ನಡೆಯುತ್ತಿದೆ. ಈ ಹಿಂದೆ ವರದಿ ಮಾಡಿದ್ದಕ್ಕಿಂತ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವುದನ್ನು ಚಿತ್ರಗಳು ಬಹಿರಂಗಪಡಿಸಿವೆ.




