Thursday, October 10, 2024

Latest Posts

ಟ್ರಾಫಿಕ್ ರೂಲ್ಸ್ ಫಾಲೋ ಮಾಡದವರಿಗೆ ಮುಂದೈತೆ ಮಾರಿಹಬ್ಬ..!

- Advertisement -

ಬೆಂಗಳೂರು: ಇನ್ನು ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋದಕ್ಕೂ ಮುಂಚೆ ಸ್ವಲ್ಪ ಯೋಚನೆ ಮಾಡಿ. ಹಾಗಂತ ಯಾರೂ ಕೂಡ ಉದ್ದೇಶಪೂರ್ವಕವಾಗಿ ನಿಯಮ ಉಲ್ಲಂಘನೆ ಮಾಡೋದಿಲ್ಲ. ಲೇಟ್ ಆಗ್ತಿದೆ ಯಾರು ಸುಮ್ನೆ ಟೈಮ್ ವೇಸ್ಟ್ ಮಾಡೋರು ಅಂತ ಸುಲಭವಾಗಿ ತೆಗೆದುಕೊಳ್ಳೋರಿಗೆ ಇನ್ನುಮುಂದೆ ಟ್ರಾಫಿಕ್ ಪೊಲೀಸರು ಸರಿಯಾಗಿಯೇ ಬರೆ ಹಾಕೋದಕ್ಕೆ ಕಾಯ್ತಾಯಿದ್ದಾರೆ.

ರಾಜ್ಯ ಸರ್ಕಾರ ಇದೀಗ ಸಂಚಾರಿ ದಂಡದ ಹೊಸ ಶುಲ್ಕ ಜಾರಿಗೆ ತಂದಿದೆ. ವಾಹನ ಚಲಾಯಿಸೋವಾಗ ಜಮ್ ಅಂತ ಮೊಬೈಲ್ ನಲ್ಲಿ ಮಾತನಾಡೋವ್ರಿಗೆ 100 ರೂಪಾಯಿ ಫೈನ್ ಹಾಕೋ ಬದಲಿಗೆ 1000 ರೂಪಾಯಿ ಫೈನ್ ಹಾಕ್ತಾರೆ. ಇನ್ನು ವಾಹನಕ್ಕೆ ವಿಮೆ( ಇನ್ಶೂರೆನ್ಸ್) ಇಲ್ಲದಿದ್ದೆ 1000 ಸಾವಿರ ರೂಪಾಯಿ ದಂಡ ಕಟ್ಟಬೇಕು. ಇನ್ನೂ ನೋಂದಣಿಯಾಗದ ವಾಹನ ಚಲಾಯಿಸಿದ್ರೆ 5000 ರೂಪಾಯಿ. ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲಿದಿದ್ರೆ 5000 ರೂಪಾಯಿ. ನೋ ಪಾರ್ಕಿಂಗ್ ಜಾಗಗಳಲ್ಲಿ ವಾಹನ ನಿಲುಗಡೆ ಮಾಡಿದ್ರೆ 1000 ರೂಪಾಯಿ ದಂಡ ಕಟ್ಟಲೇಬೇಕು.

ಇನ್ನು ಕುಡಿದು ನಶೆಯಲ್ಲಿ ಗಾಡಿ ಓಡಿಸೋರಿಗೆ ಮಾತ್ರ ಪೊಲೀಸರು ಭರ್ಜರಿ ದಂಡ ಹಾಕ್ತಾರೆ. ಡ್ರಿಂಕ್ ಅಂಡ್ ಡ್ರೈವ್ ಮಾಡಿದ್ರೆ ಬರೋಬ್ಬರಿ 25000 ರೂಪಾಯಿ ದಂಡ ಫಿಕ್ಸ್. ಹೀಗಾಗಿ ಇನ್ನು ಮುಂದೆ ನಮ್ಮ ಸುರಕ್ಷತೆಗಾಗಿ ಅಂತ ಮಾಡಿರೋ ಟ್ರಾಫಿಕ್ ರೂಲ್ಸ್ ಫಾಲೋ ಮಾಡಿದ್ರೆ ನಿಮಗೂ ಸೇಫ್ಟಿ, ನಿಮ್ಮ ಜೇಬಿಗೂ ಸೇಫ್ಟಿ.

10 ರೂಪಾಯಿ ಕಾಯಿನ್ ಇದಾವಲ್ಲಾ ಅನ್ನೋ ಚಿಂತೆ ಬೇಡ. ಇನ್ಮುಂದೆ ಇದೂ ಬಳಕೆಯಾಗುತ್ತೆ..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=fWx0zYi5hqk
- Advertisement -

Latest Posts

Don't Miss