Sunday, April 20, 2025

Latest Posts

Transport Minister SriRamulu ಕ್ಷೇತ್ರದಲ್ಲೇ ಬಿಜೆಪಿಗೆ ಮುಖಭಂಗ..!

- Advertisement -




ಚಿತ್ರದುರ್ಗ : ಸಾರಿಗೆ ಸಚಿವ ಶ್ರೀರಾಮುಲು (SriRamulu) ಅವರಿಗೆ ಭಾರಿ ಮುಖಭಂಗ ಚಿತ್ರದುರ್ಗ (Chitradurga) ಜಿಲ್ಲೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ ಪಟ್ಟಣ ಪಂಚಾಯತಿ (Town panchayat) ಚುನಾವಣೆಯಲ್ಲಿ 16 ವಾರ್ಡಗಳಲ್ಲಿ ಕಾಂಗ್ರೆಸ್ 11 ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ರೆ , 3 ಪಕ್ಷೇತರ, 2 ಬಿಜೆಪಿ ಗೆಲುವು ಸಾಧಿಸಿದೆ. ಇನ್ನೂ ಗೆದ್ದಿರುವ ಮೂವರು ಪಕ್ಷೇತ್ರರಾದ ದುರ್ಗಪ್ಪ, ಕುಮಾರ್, ಉಮಾಪತಿ ಇವರು ಕಾಂಗ್ರೆಸ್ ಬಂಡಾಯ ಆಭ್ಯರ್ಥಿಗಳು. ಬಿಜೆಪಿ ತೆಕ್ಕೆಯಲ್ಲಿದ್ದ ನಾಯಕನಹಟ್ಟಿ ಪಟ್ಟಣ ಪಂಚಾಯತಿ ಇದೀಗ ಕಾಂಗ್ರೆಸ್ ಬಹುಮತ ಪಡೆಯುವುದರ ಮೂಲಕ ಆಡಳಿತ ಚುಕ್ಕಾಣಿ ಹಿಡಿದಿದೆ. ಶ್ರೀರಾಮುಲು ಎದುರು ಪರಾಭವಗೊಂಡಿದ್ದ ಯೋಗಿಶ್ ಬಾಬು (Yogish Babu) ನೇತೃತ್ವದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಗೆಲುವು ನಮ್ಮ ಕಾಂಗ್ರೆಸ್ ಪಕ್ಷದ ಗೆಲುವು ಕ್ಷೇತ್ರದ ಜನರು ಸಚಿವ ಶ್ರೀರಾಮುಲು ಅವರ ಆಡಳಿತ ವನ್ನು ವಿರೋಧಿಸಿ, ಅವರು ಕ್ಷೇತ್ರದಲ್ಲಿ ಶೂನ್ಯ ಅಭಿವೃದ್ಧಿ ಆಪ್ತಸಲಹೆಗಾರರ ದರ್ಬಾರ್ ಕ್ಷೇತ್ರದಲ್ಲಿ ಮಿತಿ ಮೀರಿದದ ವರ್ತನೆ ನೋಡಿರಿವ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಸಿದ್ದಾರೆ. ಹೊರಗಿನಿಂದ ಬಂದು ಗೆದ್ದು ಶಾಸಕನಾಗಿ ಮಂತ್ರಿಯಾದ ಶ್ರೀರಾಮುಲು ಅವರಿಗೆ ಇದೊಂದು ಪಾಠ. ಶ್ರೀರಾಮುಲು ಅವರ ಕ್ಷೇತ್ರಕ್ಕಿಂತ ಬೇರೆ ಕ್ಷೇತ್ರಗಳ ಮೇಲೆ ಪ್ರೀತಿ. ಶ್ರೀರಾಮುಲು ಅವರು ಈಗಿಂದನೇ ಬೇರೆ ಕ್ಷೇತ್ರ ನೋಡಿಕೊಳ್ಳಲಿ ಎಂದು ಯೋಗಿಶ್ ಬಾಬು ಹೇಳಿದ್ದಾರೆ. ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವುದರ ಮೂಲಕ ಬಹುಮತ ಪಡೆದಿದ್ದೇವೆ. ಇದು ಮುಂದಿನ ಚುನಾವಣೆಗೆ ನಾಂದಿ ಎಂದು ಯೋಗೀಶ್ ಬಾಬು ಹೇಳಿದ್ದಾರೆ.

- Advertisement -

Latest Posts

Don't Miss