Friday, August 29, 2025

Latest Posts

Tumakuru  : ಖಾಸಗಿ ಬಸ್ ಪಲ್ಟಿ ಹೊಡೆದು 5 ಮಂದಿ ಸಾವು ಹಲವರಿಗೆ ಗಂಭೀರ ಗಾಯ..!

- Advertisement -

ತುಮಕೂರು : ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ (Pavagada Taluk) ಪಳವಳ್ಳಿ ಕಟ್ಟೆಯ ಬಳಿ ಇಂದು ಬೆಳಗ್ಗೆ ಖಾಸಗಿ ಬಸ್ ಪಲ್ಟಿ ಹೊಡೆದು ಭೀಕರ ಅಪಘಾತ (A terrible accident) ಸಂಭವಿಸಿದೆ. ಇನ್ನು ಈ ಭೀಕರ ಅಪಘಾತದಲ್ಲಿ ತಳದಲ್ಲಿ 5 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿವೆ. ಇನ್ನು ಈ ಪ್ರಕರಣ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪಾವಗಡ ಪೊಲೀಸ್ ಸ್ಟೇಷನ್ (Police Station) ನಲ್ಲಿ ಪ್ರಕರಣ ದಾಖಲಾಗಿದೆ. ಎಸ್ ವಿ ಟಿ ಸಂಸ್ಥೆಗೆ (SVT organization) ಸೇರಿದ ಖಾಸಗಿ ಬಸ್ ಇದಾಗಿದ್ದು ಪಳವಳ್ಳಿ ಕಟ್ಟೆಯ ತಿರುವಿನಲ್ಲಿ ಬಸ್ ಚಲಾಯಿಸುತ್ತಿದ್ದಾಗ ದುರ್ಘಟನೆ ಸಂಭವಿಸಿದ್ದು, ಬಸ್ನ ಸಾಮರ್ಥ್ಯಕ್ಕೂ ಮೀರಿ ಹೆಚ್ಚಿನ ಜನರನ್ನು ಬಸ್ ನಲ್ಲಿ ತುಂಬಿಸಿಕೊಂಡು ವೇಗವಾಗಿ ಚಲಾಯಿಸಿದ್ದು ಇಂತಹ ದುರ್ಘಟನೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಬಸ್ ಮೇಲೆ ಸುಮಾರು ಮಲಗುತ್ತೀರಾ ಕುಳಿತಿದ್ದರು ಎಂದು ತಿಳಿದುಬಂದಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ (District Collector), ಪೊಲೀಸ್ ವರಿಷ್ಠರು ಹಾಗೂ ಸ್ಥಳೀಯ ಶಾಸಕರು ಆಗಮಿಸಿದ್ದು ಗಾಯಾಳುಗಳನ್ನು ಆಂಬುಲೆನ್ಸ್ ನಲ್ಲಿ ಶೀಘ್ರವಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕಾರ್ಯ ನಡೆಯುತ್ತಿದೆ. ಇನ್ನು ಈ ಘಟನೆ ನಡೆಯುತ್ತಿದ್ದಂತೆಯೇ ಅಪಘಾತವಾದ ಕೂಡಲೇ ಚಾಲಕ ಹಾಗೂ ನಿರ್ವಾಹಕ ಪರಾರಿಯಾಗಿದ್ದಾರೆ.

- Advertisement -

Latest Posts

Don't Miss