Saturday, July 5, 2025

Latest Posts

ಒಂದೇ ತಿಂಗಳ ಎರಡು ಕೊ* ಪ್ರಕರಣಗಳು : ಎಚ್ಚೆತ್ತ ಹುಬ್ಬಳ್ಳಿ ಪೊಲೀಸರಿಂದ ರೌಡಿಗಳ ಮನೆಗೆ ದಾಳಿ

- Advertisement -

Hubli News: ಹುಬ್ಬಳ್ಳಿ: ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ್ ಹತ್ಯೆ ಹಿನ್ನೆಲೆ, ಬೆಳ್ಳಂ ಬೆಳಿಗ್ಗೆ ಪೊಲೀಸರು ರೌಡಿ ಶೀಟರ್‌ಗಳ ಮನೆ ಮನೆಗೆ ತೆರಳಿ ವಾರ್ನ್ ಮಾಡಿದ್ದಾರೆ.

ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ರೌಡಿ ಶೀಟರ್ ಮನೆ ಮೇಲೆ ರೇಡ್ ಮಾಡಿದ್ದಾರೆ. ಸುಮಾರು ಹತ್ತಕ್ಕೂ ಹೆಚ್ಚು ರೌಡಿಶೀಟರ್ ಮನೆ ಮೇಲೆ ಪೊಲೀಸರು ದಾಳಿ ಮಾಡಿ, ತಲಾಶ್ ನಡೆಸಿದ್ದಾರೆ. ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ್ ಹತ್ಯೆ ನಂತರ ಎಚ್ಚೆತ್ತುಕೊಂಡಿರುವ ಪೊಲೀಸರು, ಬೆಂಡಿಗೇರಿ ಪೊಲೀಸ್ ‌ಠಾಣೆ ಇನ್ಸ್ಪೆಕ್ಟರ್ ಮಾರುತಿ ಗುಳ್ಳಾರಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಒಂದೇ ತಿಂಗಳಲ್ಲಿ ಇಬ್ಬರು ಯುವತಿಯರ ಹತ್ಯೆ ನಡೆದಿತ್ತು. ಅದರಲ್ಲೂ ಇಬ್ಬರ ಹತ್ಯೆ ಒಂದೇ ಕಾರಣಕ್ಕೆ ನಡೆದಿತ್ತು. ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರೌಡಿ ಶೀಟರ್ ಮನೆ ಮೇಲೆ ದಾಳಿ ಮಾಡಿ, ಖಡಕ್ ಎಚ್ಚರಿಕೆ ನೀಡಲಾಗಿದೆ.

ನಾವು ಯಾರ ಕೈಗೊಂಬೆ ಆಗಿ ಕೆಲಸ ಮಾಡಲ್ಲ ಅಂದಿದ್ದಾರೆ. ಹೀಗಾಗಿ ನಮಗೆ ನ್ಯಾಯ ಸಿಗೋ ಭರವಸೆ ಇದೆ: ನಿರಂಜನ್‌

ಅಂಜಲಿ ಹಂತಕ ಗಿರೀಶ್‌ಗೆ ಕಠಿಣ ಶಿಕ್ಷೆಯಾಗಬೇಕು: ವಿಚಾರಣೆ ಬಳಿಕ ಸಂತ್ರಸ್ತೆ ಹೇಳಿಕೆ

ಅಂಜಲಿ ಹಂತಕ ಗಿರೀಶ್‌ಗೆ ಕಠಿಣ ಶಿಕ್ಷೆಯಾಗಬೇಕು: ವಿಚಾರಣೆ ಬಳಿಕ ಸಂತ್ರಸ್ತೆ ಹೇಳಿಕೆ

- Advertisement -

Latest Posts

Don't Miss