Wednesday, December 25, 2024

Latest Posts

BJP MLA Rajkumar Patil ಗೆ ಎರಡು ಕೋಟಿ ಬ್ಲಾಕ್ ಮೆಲ್..!

- Advertisement -

ಬೆಂಗಳೂರು : ಎರಡು ಕೋಟಿ ರೂಪಾಯಿ ನೀಡುವಂತೆ  ಮಹಿಳೆಯೊಬ್ಬರು ನನ್ನ ಮೇಲೆ  ಬ್ಲಾಕ್ ಮೆಲ್ (Black Mel) ನಡಿತಿದೆ ಎಂದು ಬಿಜೆಪಿ ಸೇಡಂನ ಶಾಸಕ ರಾಜಕುಮಾರ್ ಪಾಟೀಲ್ (MLA Rajkumar Patil ) ವಿಧಾನಸೌಧ ಪೊಲೀಸ್ ಠಾಣೆ (vidanaswoda police Station) ದೂರು ದಾಖಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಆಕೆಯ ಪತಿಯನ್ನು ವಿಧಾನಸೌಧ ಪೊಲೀಸರು ವಿಚಾರಣೆ ನಡೆಸಿ ಕಳುಹಿಸಿ ಕೊಟ್ಟಿದ್ದಾರೆ. ಬಿಜೆಪಿಯ ಶಾಸಕರೊಬ್ಬರು ನನ್ನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಮಗು ಹುಟ್ಟಿಸಿ ಮೋಸ ಮಾಡಿದ್ದಾರೆ. ಈ ಕುರಿತು ತಮ್ಮನ್ನು ಭೇಟಿ ಮಾಡಲು ಅನೇಕ ಸಲ ಪ್ರಯತ್ನಿಸಿದೆ. ಸಾಧ್ಯವಾಗದ ಕಾರಣ ಫೇಸ್‌ಬುಕ್ ಮೂಲಕ ತಮ್ಮ ಗಮನಕ್ಕೆ ತರುತ್ತಿದ್ದು ನ್ಯಾಯ ಒದಗಿಸುವಂತೆ ಕೋರಿ ಮಹಿಳೆಯೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಫೇಸ್ ಬುಕ್ ಗೆ ಟ್ಯಾಗ್ ಮಾಡಿದ್ದರು. ಈ ವಿಚಾರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ (Police Commissioner Kamalapant), ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ತನಿಖೆ ಹಂತದಲ್ಲಿದೆ ಎಂದಷ್ಟೇ ಸ್ಪಷ್ಟನೆ ನೀಡಿದ್ದಾರೆ.

- Advertisement -

Latest Posts

Don't Miss