Thursday, October 16, 2025

Latest Posts

ಜಗತ್ತಿನಲ್ಲಿ ಎರಡ್ಮೂರು ಪ್ರಧಾನಿಗಳ ಸಾವಾಗಲಿದೆ: ಕೋಡಿಶ್ರೀ ಭವಿಷ್ಯ

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಮಾತನಾಡಿದ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಾತನಾಡಿದ್ದು, ಭವಿಷ್ಯ ನುಡಿದಿದ್ದಾರೆ.

ಭಾರತೀಯ ಪದ್ಧತಿಯಲ್ಲಿ ಸಂವತ್ಸರಗಳಿಗೆ ಮಹತ್ವ ಇದೆ. ಈಗ ಕ್ರೋಧಿ ನಾಮ ಸಂವತ್ಸರ ನಡೆದಿದೆ. ಈ ಸಂವತ್ಸರ ಒಳಿತಿಗಿಂತ ಕೆಡಕು ಹೆಚ್ಚು ಮಾಡುತ್ತದೆ. ಭೂಮಿ, ಅಗ್ನಿ, ಆಕಾಶ, ವಾಯು, ಜಲ ಐದರಿಂದಲೂ ತೊಂದರೆ ಇದೆ.ಆಕಾಶ ತತ್ವ ಆಗಲಿದೆ. ಆ ಆಕಾಶ ತತ್ವ ಏನಂತ ನಾನು ಶ್ರಾವಣದಲ್ಲಿ ಹೇಳುವೆ. ಸುರಿದಲ್ಲೊಯೇ ಮಳೆ ಸುರಿಯುತ್ತಿದೆ. ಭೂ ಕುಸಿತ, ಜಲಪ್ರಳಯ ಲಕ್ಷಣ  ಇದೆ. ಗಾಳಿಯಿಂದಲೂ ತೊಂದರೆ ಆಗಲಿದೆ. ಅತಂತ್ರದಲ್ಲೇ ರಾಷ್ಟ್ರದಲ್ಲಿ ಅಧಿಕಾರಕ್ಕಾಗಿ ಕೂಡಿದ್ದಾರೆ.

ಇನ್ನೂ ಅಂಗಡಿ ಒಪನ್ ಆಗಿಲ್ಲ. ವ್ಯಾಪಾರ ಶುರುವಾಗಲಿ. ಆ ಬಳಿಕ ರಾಷ್ಟ್ರ ರಾಜಕಾರಣದ ಭವಿಷ್ಯ ಹೇಳುವೆ. ಅದೆಲ್ಲದರ ಬಗ್ಗೆ ಸಮಗ್ರವಾಗಿ ಶ್ರಾವಣದಲ್ಲಿ ಹೇಳುವೆ. ಅಶುಭ ಈಗಲೇ ನುಡಿಯಬಾರದು. ಶುಭವೋ ಅಶುಭವೋ ಅಂತಾ ಶ್ರಾವಣದಲ್ಲಿ ಹೇಳುವೆ.

ಮಹಾಭಾರತದಲ್ಲಿ ಅಭಿಮನ್ಯುವಿನ ಬಿಲ್ಲಿನ ದಾರ ಕರ್ಣನಿಂದ ಕಟ್ ಮಾಡಿಸಿದರು. ಈಗ ಅಭಿಮನ್ಯುವಿನ ಹೆಂಡತಿ ಪ್ರವೇಶ ಸಂಸತ್ ನಲ್ಲಿ ಮಾಡ್ತಾಳೆ. ಆದರೆ ದುರ್ಯೋಧನನ ತೊಡೆ ಒಡೆಸಿದ ಕೃಷ್ಣ ಈಗ ಇಲ್ಲ. ಹೀಗಾಗಿ ದುರ್ಯೋಧನ ಗೆಲ್ಲುತ್ತಾನೆ. ಜಗತ್ತಿನಲ್ಲಿ ಎರಡ್ಮೂರು ಪ್ರಧಾನಿಗಳ ಸಾವು ಆಗಲಿದೆ. ದೊಡ್ಡ ದೊಡ್ಡವರಿಗೆ ನೋವು ತಾಪ ದುಃಖ ಆಗಲಿದೆ.

ಕರೆಯದೆ ಬರುವವನು ಕೋಪ, ಬರೆಯದೇ ಓದುವವನು ಕಣ್ಣು, ಬರಗಾಲಿನಲ್ಲಿ ನಡೆಯುವವನ ಮನಸ್ಸು, ಈ ಮೂರು ನಿಯಂತ್ರಣದಲ್ಲಿಡಬೇಕು. ದುಡ್ಡು, ಅಧಿಕಾರ ಮುಖ್ಯ ಅಂತಾ ಹೊರಟಿದ್ದಾರೆ. ಅಧಃಪತನಕ್ಕೆ ಅದೆ ಕಾರಣ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

Political Special: ಮೋದಿ ಬ್ರ್ಯಾಂಡ್‌ಗೆ ಏಟು ಬಿದ್ದಿದೆ: ಚೇತನ್ ಅಹಿಂಸಾ ವಿಶೇಷ ಸಂದರ್ಶನ

ಮದುವೆಯಾಗಿ ಒಂದೇ ತಿಂಗಳಲ್ಲಿ ಕೋಟಿ ಕೋಟಿ ಸಾಲದಲ್ಲಿ ಮುಳುಗಿದ ನಟಿಯ ಗಂಡ: ಆಸ್ತಿ ಮಾರಾಟ

- Advertisement -

Latest Posts

Don't Miss