Saturday, July 27, 2024

Latest Posts

ಹಾಸನದಲ್ಲಿ ಒಂದೇ ರಾತ್ರಿ 2 ಕಡೆ ಪೊಲೀಸ್ ದಾಳಿ: ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ

- Advertisement -

Hassan News: ಹಾಸನ: ಅಕ್ರಮವಾಗಿ ಗೋಮಾಂಸ ಮಾರಾಟಕ್ಕಾಗಿ 60 ಕ್ಕೂ ಹೆಚ್ಚು ಗೋವುಗಳನ್ನು ವಧೆ ಮಾಡಿ, ಉಳಿದ ಗೋವುಗಳನ್ನು ಸಾಗಿಸಲಾಗುತ್ತಿತ್ತು. ಆದರೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಜಿಲ್ಲೆ, ಚನ್ನರಾಯಪಟ್ಟಣದ, ಬಾಗೂರು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಗೋಮಾಂಸ ಮಾರಾಟಕ್ಕಾಗಿ ಸುಮಾರು 60ಕ್ಕೂ ಗೋವುಗಳನ್ನು ಹತ್ಯೆ ಮಾಡಿ ದುಷ್ಟರು ನೇತು ಹಾಕಿದ್ದಾರೆ. ಆದರೆ ಐದು ಗೋವುಗಳನ್ನು ಹಾಗೆ ಸಾಗಿಸುತ್ತಿದ್ದುದಕ್ಕಾಗಿ, ಪೊಲೀಸರು 5 ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ, ಹತ್ತು ಸಾವಿರ ಕೆಡಿ ಗೋಮಾಂಸ ವಶ ಪಡಿಸಿಕೊಂಡಿದ್ದಾರೆ.

ಮಹಮದ್ ಅಬ್ದುಲ್ ಹಕ್ ಎಂಬುವವರ ವಿರುದ್ಧ ಆರೋಪ ಮಾಡಲಾಗಿದ್ದು, ಗೋವುಗಳನ್ನು ಹತ್ಯೆ ಮಾಡುವಾಗಲೇ ಪೊಲೀಸರು ದಾಳಿ ನಡೆಸಿದ್ದಾರೆ. ದುರುಳರು ಗೋವುಗಳನ್ನು ಕಡಿದು ಅವುಗಳ ರಕ್ತವನ್ನು ಕೆರೆಗೆ ಹರಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಇನ್ನು ಪೊಲೀಸರು ದಾಳಿ ಮಾಡುತ್ತಿರುವಂತೆ, ಕಿಡಿಗೇಡಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಇನ್ನೊಂದೆಗೆ ಪೊಲೀಸರು ಚೆನ್ನರಾಯಪಟ್ಟಣದಲ್ಲಿ ದಾಳಿ ಮಾಡಿ, ಅಕ್ರಮವಾಗಿ ಸಾಗಿಸುತ್ತಿದ್ದ 26 ಸಿಂಧಿ ಕರುಗಳ ರಕ್ಷಣೆ ಮಾಡಿದ್ದಾರೆ. ಪೊಲೀಸರು ದಾಳಿ ಮಾಡುತ್ತಿದ್ದಂತೆ ವಾಹನ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ. ಬಳಿಕ ಗೂಡ್ಸ್ ಗಾಡಿಯನ್ನು ವಶಕ್ಕೆ ಪಡೆದ ಪೊಲೀಸರು, ಕರುಗಳನ್ನು ರಕ್ಷಿಸಿ, ಅವುಗಳ ಆರೈಕೆ ಮಾಡಿದ್ದಾರೆ.

ಕಷ್ಟಕ್ಕೆ ಸ್ಪಂದಿಸುವ ಡಿ.ಕೆ.ಸುರೇಶ್ ಬೇಕೊ? ವೈಟ್ ಕಾಲರ್ ಡಾ.ಮಂಜುನಾಥ್ ಬೇಕೋ?ನೀವೇ ನಿರ್ಧರಿಸಿ ಎಂದ ಸಿಎಂ

ಮೇಡಂ ಟುಸ್ಸಾಡ್ಸ್‌ನಲ್ಲಿರುವ ತಮ್ಮ ಮೇಣದ ಪ್ರತಿಮೆ ಅನಾವರಣಗೊಳಿಸಿದ ನಟ ಅಲ್ಲು ಅರ್ಜುನ್

ನಾವೆಲ್ಲರೂ ಲಿಂಗಾಯತರು ನಮ್ಮನ್ನು ಬೆಳೆಸಿದ್ದು ಪ್ರಹ್ಲಾದ್ ಜೋಶಿ: ಶಾಸಕ ಎಂ.ಆರ್.ಪಾಟೀಲ್

- Advertisement -

Latest Posts

Don't Miss