Hubballi News: ಹುಬ್ಬಳ್ಳಿ ರಾಜ್ಯ ಸರ್ಕಾರ ಶಕ್ತಿ ಯೋಜನೆ ಮಾಡಿದ ರಿಂದ ಬಸ್ಸುಗಳ ಕೊರತೆ ಕೂಡ ಅಷ್ಟೇ ಹೆಚ್ಚಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ಸುಗಳು ಇಲ್ಲದೆ ಶಾಲಾ-ಕಾಲೇಜುಗಳು ಹೋಗಲು ಪರದಾಡುತ್ತಿದ್ದಾರೆ. ಅದೇ ರೀತಿ ನಿನ್ನೆ ಬಸ್ಸುಗಳನ್ನು ತಡೆದು ಕಾಲೇಜು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಅಹೋರಾತ್ರಿ ಪ್ರತಿಭಟನೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ನಡೆದಿದೆ.
ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಚಾಲಕರು ದಿನಂಪ್ರತಿ ಬಸ್ ನಿಲ್ಲಿಸದೆ ಹಾಗೆ ಹೋಗುತ್ತಿದ್ದರಂತೆ. ಇದಕ್ಕೆ ರೋಸಿ ಹೋದ ವಿದ್ಯಾರ್ಥಿಗಳು ಮತ್ತು ಉಮಚಗಿ ಗ್ರಾಮಸ್ಥರು ನಿನ್ನೆ ಸಾಯಂಕಾಲ ಉಮಚಗಿ ಗ್ರಾಮದ ಮೇಲೆ ಹೋಗುತ್ತಿದ್ದ ಕೊಡ್ಲಿವಾಡ್ , ಲಕ್ಷ್ಮೇಶ್ವರ ಬಸ್ಸುಗಳು ತಡೆದು ಪ್ರತಿಭಟನೆ ಮಾಡಿದ್ದಾರೆ. ವಿಷಯ ತಿಳಿದು ಬಂದ ಕಂಟ್ರೋಲ್ ಅಧಿಕಾರಿಗಳ ಮಧ್ಯೆ ರಾತ್ರಿ ಗ್ರಾಮಸ್ಥರ ಮನವೊಲಿಸಿ, ಮುಂದಿನ ದಿನಗಳಲ್ಲಿ ಬಸ್ಸುಗಳನ್ನು ಸರಿಯಾಗಿ ಸಮಯಕ್ಕೆ ಬಿಡುತ್ತೇವೆ ಎಂದು ಹೇಳಿ ಬಸ್ಸುಗಳನ್ನು ತೆಗೆದುಕೊಂಡು ಬಂದಿದ್ದಾರೆ.
ಮತ್ತೆ ಏನಾದರೂ ಬಸ್ ನಿಲ್ಲಿಸದೆ ಹೋದರೆ, ಇದೇ ರೀತಿ ಬಸ್ಸುಗಳನ್ನು ತಡೆಯುತ್ತೇವೆಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಕಿಡಿ ಕಾರಿದ್ದಾರೆ.
ಪೊಲೀಸ್ ಕಿರುಕುಳಕ್ಕೆ ಯುವಕ ಆತ್ಮಹತ್ಯೆ: ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು!




