Haveri News: ಶಿಗ್ಗಾಂವಿ: ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗದ ಅಧ್ಯಕ್ಷರಾಗಿ ಯುವ ಉದ್ಯಮಿ, ಶಿಗ್ಗಾಂವಿಯ ಉಮೇಶ್ ಎಚ್. ಪಾಟೀಲ್ರನ್ನು ನೇಮಕ ಮಾಡಲಾಗಿದೆ.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಉಮೇಶ್ ಎಚ್. ಪಾಟೀಲ್ರನ್ನು ನೇಮಕ ಆದೇಶ ಹೊರಡಿಸಿದ್ದಾರೆ. ಮಹಾಸಭಾದ ಗುರಿ ಮತ್ತು ಧೈಯೋದ್ದೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೂತನ ಅಧ್ಯಕ್ಷ ಉಮೇಶ್ ಅವರಿಗೆ ಸೂಚಿಸಿದ್ದಾರೆ.
ಇದೇ ವೇಳೆ, ಮಹಾಸಭಾದ ರಾಷ್ಟ್ರೀಯ ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗದ ಅಧ್ಯಕ್ಷರಾಗಿ ನೇಮಕವಾದ ಉಮೇಶ್ ಎಚ್. ಪಾಟೀಲ್ರನ್ನುಅರಣ್ಯ ಸಚಿವ ಈಶ್ವರ ಖಂಡ್ರೆ ಸನ್ಮಾನಿಸಿ ಗೌರವಿಸಿದರು. ಉಪ್ಪಿನಬೆಟಗೇರಿ ವಿರಕ್ತ ಮಠದ ಕುಮಾರ ವಿರೂಪಾಕ್ಷ ಮಹಾಸ್ವಾಮೀಜಿ, ಅಮೀನಗಡ ಪ್ರಭುಶಂಕರೇಶ್ವರ ಮಠದ ಶಂಕರ ರಾಜೇಂದ್ರ ಮಹಾಸ್ವಾಮೀಜಿ ಸೇರಿ ಇತರರು ಉಪಸ್ಥಿತರಿದ್ದರು.