Wednesday, February 19, 2025

Latest Posts

ಪ್ರಯಾಗ್‌ರಾಜನ ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿದ ಕೇಂದ್ರ ಸಚಿವ ಜೋಶಿ ಕುಟುಂಬ

- Advertisement -

Political News: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕುಟುಂಬದವರು ಇಂದು ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಜೋಶಿ, ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ, ಆಧ್ಯಾತ್ಮಿಕ ಉತ್ಸವ, ಹಿಂದೂ ಧರ್ಮದ ಒಂದು ಸಾಮೂಹಿಕ ತೀರ್ಥಯಾತ್ರೆಯಾಗಿ ಯಶಸ್ವಿಯಾಗಿ ಜರಗುತ್ತಿರುವ ಪ್ರಯಾಗರಾಜದ ಮಹಾಕುಂಭದಲ್ಲಿ ಇಂದು ಕುಟುಂಬ ಸಹಿತ ಪಾಲ್ಗೊಂಡು ಪವಿತ್ರ ಸ್ನಾನ ಮಾಡುವ ಸುವರ್ಣ ಅವಕಾಶ ನನ್ನದಾಯಿತು. ಇದು ನನಗೆ ಅತ್ಯಂತ ದೈವಿಕ ಕ್ಷಣ. ಮಹಾಕುಂಭ ಒಂದು ಆಧ್ಯಾತ್ಮಿಕ ಅನುಭವ. ಇಲ್ಲಿ ಪವಿತ್ರ ಸ್ನಾನ ಮಾಡುವುದು ನಮಗೆ ಅಲೌಕಿಕ ಶಕ್ತಿಗಳನ್ನು ಒಟ್ಟುಗೂಡಿಸುವ ಅವಕಾಶ. ಕುಂಬಮೇಳವು ಭವ್ಯವಾದ ಯಶಸ್ಸು, ನಂಬಿಕೆ ಮತ್ತು ಸಂಸ್ಕೃತಿಯ ಆಚರಣೆಯನ್ನಾಗಿದ್ದು ಈಗಾಗಲೇ ಕೋಟಿ ಕೋಟಿ ಜನರು ಈ ಪಾವನ ಉತ್ಸವದಲ್ಲಿ ಪಾಲ್ಗೊಂಡು ಪುನಿತರಾಗಿದ್ದಾರೆ. ಹರ ಹರ ಮಹಾದೇವ ಎಂದು ಬರೆದುಕೊಂಡಿದ್ದಾರೆ.

ಮಹಾ ಪೂರ್ಣ ಕುಂಭ ಮೇಳಕ್ಕೆ ಶಿವರಾತ್ರಿ ತನಕ 40 ಕೋಟಿ ಜನರು ಬರುತ್ತಾರೆಂಬ ನಿರೀಕ್ಷೆ ಇತ್ತು. ಆದರೆ ಈಗಾಗಲೇ 55 ಕೋಟಿ ಭಕ್ತರು ಮಹಾಕುಂಭ ಮೇಳಕ್ಕೆ ಬಂದು, ಪವಿತ್ರ ಸ್ನಾನದಲ್ಲಿ ಭಾಗಿಯಾಗಿದ್ದಾರೆ. ಶಿವರಾತ್ರಿ ಜನಕ ಇನ್ನೂ ಹೆಚ್ಚಿನ ಭಕ್ತರು ಮಹಾಕುಂಭ ಮೇಳಕ್ಕೆ ಬರುವ ಸಾಧ್ಯತೆ ಇದೆ. ಇನ್ನು ಕುಂಭ ಮೇಳಕ್ಕೆ ಬರುವ ಜನರು, ಕಾಶಿ ಮತ್ತು ಅಯೋಧ್ಯೆಗೆ ಭೇಟಿ ನೀಡುವ ಕಾರಣಕ್ಕೆ, ಅಲ್ಲಿನ ದೇವಸ್ಥಾನದಲ್ಲಿಯೂ ಕೋಟಿ ಕೋಟಿ ಭಕ್ತರು ಸೇರುತ್ತಿದ್ದಾರೆ.

- Advertisement -

Latest Posts

Don't Miss