Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೊಶಿ ಅವರು ಪ್ರಗತಿಯ ನೋಟ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಚಾಲನೆ ನೀಡಿ ಬಳಿಕ ಪುಸ್ತಕ ಬಿಡುಗಡೆ ಮಾಡಿದರು.
ಹೌದು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕರುಗಳಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಎಂ. ಆರ್. ಪಾಟೀಲ, ಮಾಜಿ ಶಾಸಕರುಗಳಾದ ಅಮೃತ ದೇಸಾಯಿ ಭಾಗವಹಿಸಿದ್ದರು.
ನೆರೆದ ಜನರೊಂದಿಗೆ ಪ್ರಶೋತ್ತರದ ಸಂವಾದ ಕಾರ್ಯಕ್ರಮವನ್ನು ನಡೆಸಿದ್ದು, ವಿಶೇಷವಾಗಿ ಉದ್ದಿಮೆದಾರರು, ವಿದ್ಯಾರ್ಥಿಗಳು, ಕಾಲೇಜು ಪ್ರಾಧ್ಯಾಪಕರು ಹಾಗೂ ಇತರರೊಂದಿಗೆ ಚರ್ಚಿಸಲಾಯಿತು.
‘ಚಹಾ ಮಾರುವವರೇ ಪ್ರಧಾನಿಯಾಗಿರ್ಬೇಕಾದ್ರೆ, ಸಿದ್ಧಾಂತಗಳನ್ನು ಓದಿರುವವರು ಸಿಎಂ ಆಗುವುದರಲ್ಲಿ ತಪ್ಪಿಲ್ಲ’
ಕಾಂಗ್ರೆಸ್ ಬಿಕ್ಕಟ್ಟು ಬಗೆಹರಿಸಲು ಹಿಮಾಚಲ ಪ್ರದೇಶಕ್ಕೆ ಡಿಸಿಎಂ ಡಿಕೆಶಿ ದೌಡು