Monday, November 17, 2025

Latest Posts

ಭಾಷಣ ಮಾಡುವ ವೇಳೆ ಕುಸಿದು ಬಿದ್ದ ಕೇಂದ್ರ ಸಚಿವ ನಿತೀನ್ ಗಡ್ಕರಿ..

- Advertisement -

Political News: ಕೇಂದ್ರ ಸಚಿವ ನಿತೀನ್ ಗಡ್ಕರಿ ಚುನಾವಣಾ ಭಾಷಣ ಮಾಡುವ ವೇಳೆ ನಿಶಕ್ತಿಯಿಂದ ಕುಸಿದು ಬಿದ್ದಿದ್ದಾರೆ. ಮಹಾರಾಷ್ಟ್ರದ ಯವತ್ಮಾಲ್ ಎಂಬ ಸ್ಥಳದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ನಿತೀನ್ ಗಡ್ಕರಿ, ಭಾಷಣ ಮಾಡುತ್ತ ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ.

ಏಕ್‌ನಾಥ್ ಶಿಂಧೆ ನೇತೃತ್ವದ ಶಿವಸೇನೆಯ ನಾಯನಾಗಿರುವ ರಾಜಶ್ರೀ ಪಾಟೀಲ್ ಪರ, ಗಡ್ಕರಿ ಚುನಾವಣಾ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಬಿಜೆಪಿಗೆ ಮತ ನೀಡುವಂತೆ ಚುನಾವಣಾ ಭಾಷಣ ಮಾಡುತ್ತಿದ್ದರು. ಭಾಷಣ ಮಾಡುತ್ತಲೇ, ಗಡ್ಕರಿ ನಿಶ್ಶಕ್ತಿಯಿಂದ ನೆಲಕ್ಕೆ ಕುಸಿದು ಬಿದ್ದಿದ್ದಾರೆ.

ತಕ್ಷಣ ಅಲ್ಲೇ ಇದ್ದ ಬಾಡಿಗಾರ್ಡ್ಸ್ ಅವರನ್ನು ರಕ್ಷಿಸಿದ್ದು, ಸ್ಥಳದಲ್ಲೇ ಇದ್ದ ವೈದ್ಯರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲು ಹೇಳಿದ್ದಾರೆ. ಬಳಿಕ., ಪಕ್ಷದ ಮುಖಂಡರೆಲ್ಲ ಸೇರಿ, ಗಡ್ಕರಿಯವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

ಹಿಜಬ್ ಧರಿಸಿದ ಮಹಿಳೆಯನ್ನು ಭಾರತದ ಪ್ರಧಾನಿಯನ್ನಾಗಿ ನೋಡಬಯಸುತ್ತೇನೆ: ಒವೈಸಿ

ನಾಲಾಯಕ್ ಪದ ಬಳಕೆ: ವಿಯಜೇಂದ್ರ ವಿರುದ್ಧ ಮರಾಠ ಸಮೂದಾಯದಿಂದ ಪ್ರತಿಭಟನೆ

ಕರ್ನಾಟಕದಲ್ಲಿ 18 ರಿಂದ 20 ಸೀಟ್ ಕಾಂಗ್ರೆಸ್ ಗೆಲ್ಲೋದು ಗೊತ್ತಾದ ಮೇಲೆ ಇಂತಹ ಸುಳ್ಳು ಹೇಳ್ತಾ ಹೋಗ್ತಿದ್ದಾರೆ: ಕೋನರೆಡ್ಡಿ

- Advertisement -

Latest Posts

Don't Miss