ಎಎಪಿ ಯೊಂದಿಗೆ ಮೈತ್ರಿ ತಳ್ಳಿಹಾಕಿದ ಸಂಯುಕ್ತ ಸಮಾಜ ಮೋರ್ಚಾ ಪಾರ್ಟಿ

ಪಂಚರಾಜ್ಯಗಳ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಪಂಜಾಬ್‌ನಲ್ಲಿ ಚುನಾವಣಾ ಕಾವು ರಂಗೇರಿದೆ. ಎಸ್‌ಎಸ್‌ಎಂ ಪಾರ್ಟಿ(ಎಎಪಿ)ಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಸಂಯುಕ್ತ ಸಮಾಜ ಮೋರ್ಚದ ಮುಖ್ಯಸ್ಥ ಬಲ್ಬೀರ್ ಸಿಂಗ್ ರಾಜೇವಾಲ್, ಪಂಜಾಬ್ ವಿಧಾನಸಭಾ ಚುನಾವಣೆಗೆ ಅಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿಯ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಇದರೊಂದಿಗೆ ಇನ್ನು ಒಂದು ವಾರದೊಳಗಾಗಿ ತಮ್ಮ ಅಭ್ಯರ್ಥಿಯನ್ನು ಘೋಷಿಸುವುದಾಗಿ ಹೇಳಿದ್ದಾರೆ.
ಇದರ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಎಸ್‌ಎಸ್‌ಎಂ “ಅಮ್ ಆದ್ಮಿ ಪಕ್ಷದೊಂದಿಗೆ(ಎಎಪಿ) ಮೋರ್ಚಾ ಮೈತ್ರಿ ಮಾಡಿಕೊಳ್ಳುವುದಿಲ್ಲ, ಎಂದು ಹೇಳಿದೆ. ಇನ್ನು ಎಸ್‌ಎಸ್‌ಎಂ ವಿಧಾನಸಭೆ ಚುನಾವಣೆಯಲ್ಲಿ
60 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದೆ. ಆದರೆ ಎಎಪಿ ಕೇವಲ 10 ರಲ್ಲಿ ಸ್ಪರ್ಧಿಸುವ ಅವಕಾಶವನ್ನು ನೀಡಿದೆ ಎಂದು ಪಕ್ಷವು ಹೇಳಿದೆ.

About The Author