ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ಕಾಂಪೋಂಡರ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ, ವೈದ್ಯನ 8 ವರ್ಷದ ಪುತ್ರನನ್ನು ಅಪಹರಿಸಿ, ಕೊಂದಿದ್ದಾನೆ. ಇದಕ್ಕೆ ಕಾರಣವೇನೆಂದರೆ, ಕೆಲ ವರ್ಷಗಳ ಹಿಂದೆ ಕಾಂಪೋಂಡರ್‌ನನ್ನು ವೈದ್ಯ ಕೆಲಸದಿಂದ ಕಿತ್ತು ಹಾಕಿದ್ದ. ಇದೇ ದ್ವೇಷ ಇಟ್ಟುಕೊಂಡ ಕಾಂಪೋಂಡರ್, ಇನ್ನೋರ್ವ ವ್ಯಕ್ತಿಯ ಜೊತೆ ಸೇರಿ, ಈ ಕೃತ್ಯವೆಸಗಿದ್ದಾನೆ.
ಕಳೆದ ಎರಡು ದಿನಗಳಿಂದ ವೈದ್ಯನ ಪುತ್ರ ಅಪಹರಣಗೊಂಡಿದ್ದ, ಈ ಕುರಿತು ಶುಕ್ರವಾರ ವೈದ್ಯರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ತನಿಖೆ ಆರಂಭಿಸಿದ ಸ್ಥಳೀಯ ಪೊಲೀಸರು, ಆರೋಪಿಗಳನ್ನು ಬಂಧಿಸಿ, ಶವವನ್ನು ಪಡೆದಿದ್ದಾರೆ. ವಜಾಗೊಂಡ ಇಬ್ಬರು ನೌಕರರಾದ ನಿಜಾಮ್ ಮತ್ತು ಶಾಹೀದ್ ಬಂಧಿತ ಆರೋಪಿಗಳಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ದೇಬಾಯಿಯ ಸರ್ಕಲ್ ಅಧಿಕಾರಿ ವಂದನಾ ಶರ್ಮಾ, ಈ ಆರೋಪಿಗಳು ಈ ಹಿಂದೆ ವೈದ್ಯರ ಬಳಿ ಕಾಂಪೋಂಡರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಅವರು ಏನೋ ತಪ್ಪು ಮಾಡಿದ್ದಕ್ಕಾಗಿ, ಎರಡು ವರ್ಷ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇದೇ ದ್ವೇಷಕ್ಕೆ ವೈದ್ಯನ ಮಗನನ್ನು ಕಿಡ್ನ್ಯಾಪ್ ಮಾಡಿದ ಆರೋಪಿಗಳು, ಅವನನ್ನು ಕೊಂದಿದ್ದಾರೆ. ಅಲ್ಲದೇ, ಈ ಅಪರಾಧ ಮಾಡಿದ್ದು ತಾವೇ ಎಂದು ಒಪ್ಪಿಕೊಂಡಿದ್ದಾರೆ.

