Friday, December 27, 2024

Latest Posts

ಪಾರ್ಕಿಂಗ್ ವಿಚಾರಕ್ಕಾಗಿ ಗಲಾಟೆ: ಡಾಕ್ಟರ್‌ಗೆ ಕಪಾಳ ಮೋಕ್ಷ ಮಾಡಿದ ಕಾಂಗ್ರೆಸ್ ಮುಖಂಡ ಅರೀಫ್ ದೇಸಾಯಿ

- Advertisement -

Belagavi News: ಬೆಳಗಾವಿಯಲ್ಲಿ ಪಾರ್ಕಿಂಗ್ ವಿಚಾರಕ್ಕಾಗಿ ಗಲಾಟೆ ನಡೆದಿದ್ದು, ಡಾಕ್ಟರ್‌ಗೆ ಕಾಂಗ್ರೆಸ್ ಮುಖಂಡ ಆರೀಫ್ ದೇಸಾಯಿ ಕಪಾಳ ಮೋಕ್ಷ ಮಾಡಿದ್ದಾರೆ.

ಅಲ್ಲೇ ಇದ್ದ ಡಾಕ್ಟರ್‌ ಸಂಬಂಧಿಯೊಬ್ಬರು ಈ ದೃಶ್ಯವನ್ನು ಸೆರೆಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಪಾರ್ಕಿಂಗ್ ವಿಚಾರವಾಗಿ, ಡಾಕ್ಟರ್ ಮಾತನಾಡುತ್ತಿದ್ದರು. ನಿಮ್ಮ ಗಾಡಿ ಹಿದೆ ಬಂದು, ನಮ್ಮ ಗಾಡಿ ಸಿಕ್ಕಿ ಹಾಕಿಕೊಂಡಿತ್ತು, ಅದನ್ನೇ ನಾನು ಹೇಳುತ್ತಿದ್ದೇನೆ ಎಂದು ವಿವರಿಸುವ ವೇಳೆ, ಆರೀಫ್ ಡಾಕ್ಟರ್‌ಗೆ ಕಪಾಳಕ್ಕೆ ಹೊಡೆದಿದ್ದಾರೆ.

ಅಲ್ಲದೇ, ವೀಡಿಯೋ ಮಾಡಿಕೊಳ್ಳುತ್ತೇನೆಂದು ಡಾಕ್ಟರ್ ಹೇಳಿದಾಗ, ಮಾಡಿಕೊಳ್ಳಿ ಎಂದು ಆರೀಫ್ ಗರ್ವದಿಂದ ಹೇಳಿದ್ದಾರೆ. ಅಲ್ಲದೇ, ನಾನು ಕಾಲ್ ಮಾಡಿ, ಯಾರನ್ನು ಕರೆಸಬೇಕೋ, ಅವರನ್ನು ಕರೆಸುತ್ತೇನೆ ಎಂದು ಹೇಳಿದ್ದಾರೆ. ಅದಕ್ಕೆ ಉತ್ತರಿಸಿದ ಡಾಕ್ಟರ್, ನೀವು ಮಾಡುತ್ತಿರುವುದು ತಪ್ಪು, ಯಾರನ್ನಾದರೂ ಕರೆಸಿಕೊಳ್ಳಿ, ನಾನು ಉತ್ತರಿಸುತ್ತೇನೆ ಎಂದಿದ್ದಾರೆ.

ಅಲ್ಲದೇ ಡಾಕ್ಟರ್ ಕಾರ್‌ ಸಮಸ್ಯೆ ಬಗ್ಗೆ ವಿವರಿಸುತ್ತಿರುವಾಗಲೇ, ಅರೀಫ್ ಕೆಟ್ಟ ಪದ ಬಳಸಿ ನಿಂದನೆ ಮಾಡಿದ್ದು, ಹೆಣ್ಣು ಮಗಳು ಇದನ್ನು ಪ್ರಶ್ನಿಸಿದ್ದಾರೆ. ಅದ್ಕಕೆ ಉತ್ತರಿಸಿದ ಅರೀಫ್ ನೀ ವೀಡಿಯೋ ಮಾಡ್ಕೋ ಎಂದು ಏಕವಚನದಲ್ಲೇ ಹೇಳಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸ್ಪ್ರೆಡ್ ಆಗುತ್ತಿದ್ದಂತೆ, ಜನ ಆಕ್ರೋಶ ಹೊರಹಾಕಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಅಬುಧಾಬಿಯ ಮೊದಲ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿದ ಬಾಲಿವುಡ್ ದಿಗ್ಗಜರು

ಬಿಜೆಪಿಯ ಕುತಂತ್ರಕ್ಕೆ ಸುಪ್ರೀಂ ಕೋರ್ಟ್‌ ಕಪಾಳಮೋಕ್ಷ ಮಾಡಿದೆ: ಸಿಎಂ ಸಿದ್ದರಾಮಯ್ಯ

ಪತ್ನಿ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಕ್ಕೆ, ಪತಿ ಆತ್ಮಹತ್ಯೆಗೆ ಶರಣು..!

- Advertisement -

Latest Posts

Don't Miss