Beauty Tips: ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಕ್ರೀಮ್, ಲೋಶನ್ ಬಳಸಿದರೂ ನಿಮ್ಮ ತ್ವಚೆಯ ಅಂದ ಹೆಚ್ಚದಿದ್ದಲ್ಲಿ, ಆ ಪ್ರಾಡಕ್ಟ್‌ಗಳಲ್ಲಿ ಕೆಮಿಕಲ್ ಇದೆ ಅನ್ನೋದನ್ನು ನೀವು ಮನವರಿಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಸೌಂದರ್ಯ ಹೆಚ್ಚಿಸಿಕೊಳ್ಳಲು, ಮನೆಮದ್ದೇ ಉತ್ತಮ.
ಒಂದು ಬಾಳೆಹಣ್ಣು, ಒಂದು ಸ್ಪೂನ್ ಜೇನುತುಪ್ಪ, ಎರಡು ಹನಿ ನಿಂಬೆ ರಸ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. 20 ನಿಮಿಷ ಬಿಟ್ಟು, ತಣ್ಣೀರಿನಿಂದ ಮುಖ ತೊಳೆಯಿರಿ. ವಾರಕ್ಕೆ ಒಮ್ಮೆ ಈ ಫೇಸ್‌ಪ್ಯಾಕ್ ಹಾಕಿದ್ರೆ ಸಾಕು. ನಿಮ್ಮ ತ್ವಚೆ ಸಾಫ್ಟ್ ಆಗಿ, ಕಾಂತಿಯುತವಾಗಿರುತ್ತದೆ.
ಇನ್ನುಯೋಗರ್ಟ್ ಮತ್ತು ಸ್ಟ್ರಾಬೇರಿ ಫೇಸ್‌ಪ್ಯಾಕ್. ಇವೆರಡನ್ನೂ ಮಿಕ್ಸ್ ಮಾಡಿ, ಪೇಸ್ಟ್ ತಯಾರಿಸಿಕೊಳ್ಳಿ, ಜೊತೆಗೆ ಒಂದು ಸ್ಪೂನ್ ಜೇನುತುಪ್ಪ ಮಿಕ್ಸ್ ಮಾಡಿ. ಈ ಪೇಸ್ಟನ್ನು ಮುಖಕ್ಕೆ ಹಚ್ಚಿ, 20 ನಿಮಿಷದ ಬಳಿಕ ಮುಖ ತೊಳೆದುಕೊಳ್ಳಿ. ಸ್ಟ್ರಾಬೇರಿ ಮತ್ತು ಯೋಗರ್ಟ್ ನಿಮ್ಮ ಮುಖದ ಸೌಂದರ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮೂರನೇಯದ್ದು ಪಪ್ಪಾಯಿ ಫೇಸ್‌ಪ್ಯಾಕ್. ಕಾಲು ಕಪ್ ಪಪ್ಪಾಯಿ ಹಣ್ಣು, ಎರಡು ಸ್ಪೂನ್ ಓಟ್‌ಮೀಲ್ ಪುಡಿ ಮತ್ತು ಒಂದು ಸ್ಪೂನ್ ಜೇನುತುಪ್ಪ. ಈ ಮೂರನ್ನು ಸೇರಿಸಿ, ರುಬ್ಬಿ ಪೇಸ್ಟ್ ತಯಾರಿಸಿ. ಬಳಿಕ ಇದನ್ನು ಮುಖಕ್ಕೆ ಹಚ್ಚಿ, 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.
ನಾವು ಹೇಳಿದ ಫೇಸ್‌ಪ್ಯಾಕ್ ಬಳಸುವುದುರ ಜೊತೆಗೆ, ನೀವು ಹಣ್ಣು, ತರಕಾರಿ, ಸೊಪ್ಪು, ಮೊಳಕೆ ಕಾಳು, ಎಳನೀರು, ಮೊಸರು, ಮಜ್ಜಿಗೆ ಸೇರಿ ಆರೋಗ್ಯಕರ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ. ಜೊತೆಗೆ ಆದಷ್ಟು ನೀರಿನ ಸೇವನೆ ಮಾಡಬೇಕು. ನಿಮ್ಮ ಮುಖದಲ್ಲಿ ನ್ಯಾಚುರಲ್ ಗ್ಲೋ ಬರಬೇಕು ಅಂದ್ರೆ, ನಿಮ್ಮ ಆರೋಗ್ಯ ಚೆನ್ನಾಗಿಬೇಕು. ದೈಹಿಕ ಆರೋಗ್ಯ ಚೆನ್ನಾಗಿರಿಸಲು, ನೀವು ಆರೋಗ್ಯಕರ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ.