Saturday, July 27, 2024

Latest Posts

Uttar Pradesh : ಆರನೇ ಹಂತದಲ್ಲಿ 5 ಗಂಟೆವರೆಗೆ ಶೇ.53.31ರಷ್ಟು ಮತದಾನ..!

- Advertisement -

ಉತ್ತರ ಪ್ರದೇಶದಲ್ಲಿ (Uttar Pradesh) ಆರನೇ ಹಂತದ ವಿಧಾನಸಭೆ ಚುನಾವಣಾ (Assembly elections) ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗವು (State Election Commission) ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾರ್ಚ್ 3ರ ಗುರುವಾರ ಆರನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ. ಗುರುವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ. ಆರನೇ ಹಂತದಲ್ಲಿ ಒಟ್ಟು 676 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2.14 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ಮಾರ್ಚ್ 10ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ. ಉತ್ತರ ಪ್ರದೇಶದ 10 ಜಿಲ್ಲೆಗಳ ಒಟ್ಟು 57 ವಿಧಾನಸಭೆ ಕ್ಷೇತ್ರಗಳಿಗೆ ಆರನೇ ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದ ಅಂಬೇಡ್ಕರ್ ನಗರ (City of Ambedkar), ಬಲರಾಮ್‌ಪುರ, ಸಿದ್ಧಾರ್ಥ್ ನಗರ, ಬಸ್ತಿ, ಸಂತ ಕಬೀರ್ ನಗರ, ಮಹಾರಾಜ್‌ಗಂಜ್, ಗೋರಖ್‌ಪುರ, ಕುಶಿನಗರ, ಡಿಯೋರಿಯಾ ಮತ್ತು ಬಲ್ಲಿಯಾ ಜಿಲ್ಲೆಗಳಾಗಿವೆ. ಮಾರ್ಚ್ 7ರಂದು ಅಂತಿಮ ಹಂತದ ಹಾಗೂ 7ನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮಾರ್ಚ್ 10ರಂದು ಒಟ್ಟು ಐದು ರಾಜ್ಯಗಳಾದ ಮಣಿಪುರ, ಪಂಜಾಬ್, ಉತ್ತರ ಪ್ರದೇಶ, ಗೋವಾ ಮತ್ತು ಉತ್ತರಾಖಂಡ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ. ಉತ್ತರ ಪ್ರದೇಶ 6ನೇ ಹಂತದ ಚುನಾವಣೆಯಲ್ಲಿ ಸಂಜೆ 5ಗಂಟೆವರೆಗೆ ಶೇ.53.31ರಷ್ಟು ಮತದಾನವಾಗಿದೆ. ಮಾರ್ಚ್ 10ರ ಬಳಿಕ ಸಮಾಜವಾದಿ ಪಕ್ಷದ ನಾಯಕನನ್ನು ವಿದೇಶಕ್ಕೆ ಕಳುಹಿಸಲು ಉತ್ತರ ಪ್ರದೇಶದ ಜನತೆ ನಿರ್ಧರಿಸಿದ್ದಾರೆ. ಯೋಗಿ ಆದಿತ್ಯನಾಥ್ ಈ ಹಿಂದೆ ವಿರೋಧಪಕ್ಷದವರು ಪೂರ್ವಾಂಚಲವನ್ನು ನಿರ್ಲಕ್ಷಿಸಿದ್ದರು, ಆದರೆ ನಮ್ಮ ಸರ್ಕಾರ ಅದನ್ನು ಶಿಕ್ಷಣ ಕೇಂದ್ರವನ್ನಾಗಿ ಮಾಡಿತು.

- Advertisement -

Latest Posts

Don't Miss