ಉತ್ತರಪ್ರದೇಶದಲ್ಲಿ (Uttar Pradesh) ಇಂದು ಮೊದಲ ಹಂತದ ಮತದಾನ (Voting) 7 ಗಂಟೆಯಿಂದ ಪ್ರಾರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ 11ಗಂಟೆಯವರೆಗೆ 20.03 ರಷ್ಟು ಮತದಾನ ನಡೆದಿದೆ. ಉತ್ತರಪ್ರದೇಶದ ಮೊದಲ ಹಂತದಲ್ಲಿ 11 ಜಿಲ್ಲೆಗಳ 58 ವಿಧಾನಸಭಾ ಸ್ಥಾನಗಳಿಗೆ ಮತದಾನ (Voting for Assembly seats) ನಡೆಯುತ್ತಿದ್ದು ಇಂದು ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನ ನಡೆಯುತ್ತಿರುವ ಜಿಲ್ಲೆಗಳು ಶಾಮ್ಲಿ, ಹಾಪುರ್, ಗೌತಮ್ ಬುದ್ಧ ನಗರ, ಮುಜಾಫರ್‌ನಗರ, ಮೀರತ್, ಬಾಗ್‌ಪತ್, ಗಾಜಿಯಾಬಾದ್, ಬುಲಂದ್‌ಶಹರ್, ಅಲಿಗಢ್, ಮಥುರಾ ಮತ್ತು ಆಗ್ರಾ ಇಂದು ಮತದಾನ ನಡೆಯುತ್ತಿದೆ. ಇನ್ನು 2017ರಲ್ಲಿ ಮೊದಲ ಹಂತದ 58 ಕ್ಷೇತ್ರಗಳಲ್ಲಿ ಬಿಜೆಪಿ 53 ಸ್ಥಾನವನ್ನು ಗೆದ್ದಿತ್ತು. ಮತದಾನವೇ ದೊಡ್ಡ ಕೊಡುಗೆ ಮತದಾರರು ಜನರು ಹೊರಗೆ ಹೋಗಿ ಮತ ಚಲಾಯಿಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮನವಿ(Defense Minister Rajnath Singh appeals) ಮಾಡಿದ್ದಾರೆ.