- Advertisement -
ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಮಲೇರಿಯಾ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದ್ದು ಇದಕ್ಕೆ ವಿಶ್ವಸಂಸ್ಥೆ ಅನುಮೋದನೆ ನೀಡಿದೆ.
ಪ್ರತಿ ವರ್ಷ ವಿಶ್ವಾದ್ಯಂತ ಸುಮಾರು 5 ಲಕ್ಷಕ್ಕೂ ಅಧಿಕ ಮಂದಿ ಮಲೇರಿಯಾದಿಂದ ಸಾವನ್ನಪ್ಪುತ್ತಿದ್ದು ಇದಕ್ಕೆ ಲಸಿಕೆ ಕಂಡುಹಿಡಿಯಲು ವಿಜ್ಞಾನಿಗಳ ದಶಕಗಳ ಪ್ರಯತ್ನ ಇದೀಗ ಫಲಿಸಿದೆ. ‘ಮೊಸ್ಕಿರಿಕ್ಸ್’ ಎಂಬ ಹೆಸರಿನ ಈ ಲಸಿಕೆ ಕೇವಲ ಮಲೇರಿಯಾ ಮಾತ್ರವಲ್ಲದೆ, ಪರಾವಲಂಬಿ ಜೀವಿಗಳಿಂದ ತಗುಲುವ ಸೋಂಕನ್ನೂ ತಡೆಗಟ್ಟುತ್ತದೆ.
ಈ ಲಸಿಕೆಗೆ ಅನುಮೋದನೆ ನೀಡಿರೋ ವಿಶ್ವಸಂಸ್ಥೆ ಸದ್ಯ ಆಫ್ರಿಕಾದಲ್ಲಿ ಮಕ್ಕಳಿಗೆ ನೀಡುವಂತೆ ಸೂಚಿಸಿದೆ. ಇನ್ನು ಈ ಲಸಿಕೆ ಸಿದ್ಧಪಡಿಸಿರೋದು ಐತಿಹಾಸಿಕ ಘಟನೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.
ಇನ್ನು ಈ ಲಸಿಕೆ ಮೊದಲ ವರ್ಷದಲ್ಲಿ ಹಲವು ರೀತಿಯ ಮಲೇರಿಯಾಗಳನ್ನು ಶೇ.50ರಷ್ಟು ಪರಿಣಾಮಕಾರಿಯಾಗಿ ತಡೆಗಟ್ಟಿರೋದು ಅಧ್ಯಯನದಿಂದ ಸಾಬೀತಾಗಿದೆ.
- Advertisement -