Hubballi News: ಹುಬ್ಬಳ್ಳಿ: ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಸಂಚಾರಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಿದ್ದು, ನೈಋತ್ಯ ರೈಲ್ವೆ ವಲಯ ದರ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ.
ಹೌದು..ಬೆಂಗಳೂರು-ಯಶವಂತಪುರಕ್ಕೆ ಎಸಿ ಚೇರ್ ಕಾರ್ 410, ಎಕ್ಸಿಕ್ಯುಟಿವ್ ಕ್ಲಾಸ್-545 ರೂಪಾಯಿ ದರ ನಿಗದಿ ಮಾಡಲಾಗಿದೆ. ಬೆಂಗಳೂರು-ದಾವಣಗೆರೆಗೆ 915 ಹಾಗೂ 1740, ಬೆಂಗಳೂರು-ಹುಬ್ಬಳ್ಳಿ ಜಂಕ್ಷನ್ ಗೆ 1135, 2180ರೂಪಾಯಿ, ಬೆಂಗಳೂರಿನಿಂದ ಧಾರವಾಡಕ್ಕೆ 1165, 2010 ನಿಗದಿ ಮಾಡಲಾಗಿದೆ.
ಇನ್ನೂ ಧಾರವಾಡದಿಂದ ಪ್ರಯಾಣಿಸುವ ರೈಲಿಗೆ ಧಾರವಾಡದಿಂದ ಬೆಂಗಳೂರು 1340, 2440 ನಿಗದಿ ಮಾಡಲಾಗಿದೆ. ಧಾರವಾಡದಿಂದ ಯಶವಂತಪುರ 1340, 2440 ರೂಪಾಯಿ ನಿಗದಿ ಮಾಡಲಾಗಿದೆ. ಧಾರವಾಡ-ದಾವಣಗೆರೆ 745, 1282 ರೂಪಾಯಿ ಹಾಗೂ ಧಾರವಾಡದಿಂದ ಹುಬ್ಬಳ್ಳಿಗೆ 410,545 ರೂಪಾಯಿ ನಿಗದಿ ಮಾಡಿ ರೈಲ್ವೇ ಇಲಾಖೆ ದರಪಟ್ಟಿ ಬಿಡುಗಡೆ ಮಾಡಿದೆ.
‘ಗೃಹಜ್ಯೋತಿ ಈಗ ಸುಡುಜ್ಯೋತಿ, ಗೃಹಲಕ್ಷ್ಮಿಗೆ ಗ್ರಹಣ, ನಿದಿರೆಗೆ ಜಾರಿದೆ ಯುವನಿಧಿ’
ದೇವನಹಳ್ಳಿ ವಿಮಾನ ನಿಲ್ದಾಣಕ್ಕೂ ಕೆಂಪೇಗೌಡ ವಿಮಾನ ನಿಲ್ದಾಣ ಅಂತ ಹೆಸರಿಟ್ಟವರು ನಾವು