Monday, December 23, 2024

Latest Posts

ಪ್ರೀತಂ, ಸ್ವರೂಪ್ ಸೇರಿ ಹಲವು ಅಭ್ಯರ್ಥಿಗಳಿಂದ ವೋಟಿಂಗ್..

- Advertisement -

ಹಾಸನ: ಹಾಸನದ ಮತಗಟ್ಟೆಯಲ್ಲಿ ಶಾಸಕ ಪ್ರೀತಂಗೌಡ ಮತ ಚಲಾಯಿಸಿದ್ದು, ಅವರಿಗೆ ಅವರ ಪತ್ನಿ ಸಾಥ್ ಕೊಟ್ಟಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಕೂಡಾ ಪತತ್ನಿಯೊಂದಿಗೆ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿ, ಬಳಿಕ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.

ಕೋಲಾರ : ಕೋಲಾರದ ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್, ಕೋಲಾರದ ಸೆವೆಂತ್ ಡೇ ಅಡ್ವೆಟಿಂಸ್ಟ್ ಆಂಗ್ಲ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾವಣೆ ಮಾಡಿದ್ದಾರೆ. ವರ್ತೂರು ಪ್ರಕಾಶ್‌ಗೆ ಅವರ ಮಕ್ಕಳು ಸಾಥ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ನಟ ಜಗ್ಗೇಶ್ ಕುಟುಂಬ ಸಮೇತರಾಗಿ, ಮಲ್ಲೇಶ್ವರಂನ ಮತಗಟ್ಟೆಗೆ ಬಂದು ಮತ ಚಲಾಯಿಸಿ ಹೋಗಿದ್ದಾರೆ. ಡಿ.ವಿ.ಸದಾನಂದ ಗೌಡ,, ಶೋಭಾ ಕರಂದ್ಲಾಜೆ, ಡಾಲಿ ಧನಂಜಯ್, ಜಾವಗಲ್ ಶ್ರೀನಾಥ್, ನಳೀನ್ ಕುಮಾರ್ ಕಟೀಲ್, ಹೀಗೆ ಹಲವು ರಾಜಕೀಯ ನಾಯಕರು, ಸಿನಿಮಾ ಗಣ್ಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತಚಲಾಯಿಸಿದ್ದಾರೆ.

ಮತಗಟ್ಟೆಗೆ ಬಂದು ಮತದಾನ ಮಾಡಿ, ಮದುವೆ ಮನೆಗೆ ತೆರಳಿದ ಮಧುಮಗಳು

ಒಂದೇ ಕುಟುಂಬದ 65ಕ್ಕೂ ಹೆಚ್ಚು ಮಂದಿಯಿಂದ ಒಮ್ಮೆಲೆ ಮತದಾನ..

ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದ ಸಿಎಂ ಮತ್ತು ಮಾಜಿ ಸಿಎಂ..

- Advertisement -

Latest Posts

Don't Miss