ಹಾಸನ: ನಗರದ ಹೇಮಾವತಿ ಪ್ರತಿಮೆ ಬಳಿ ಹಿಂದೂ ಹಸಿರು ಪಡೆ ಕರ್ನಾಟಕ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ವೀರ ಸಾವರ್ಕರ್ ಜನ್ಮ ದಿನಾಚರಣೆಯನ್ನು ನಗರದ ಹೇಮಾವತಿ ಪ್ರತಿಮೆ ಎದುರು ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಸಿಹಿ ಹಂಚುವುದರ ಮೂಲಕ ಭಾನುವಾರದಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಇದೆ ವೇಳೆ ಹಿಂದೂ ಹಸಿರು ಪಡೆ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ವಿಶಾಲ್ ಅಗರ್ ವಾಲ್, ಮಾತನಾಡಿ, ವೀರ ಸಾವರ್ಕರ್ ಜನ್ಮದಿನವನ್ನು ಹಾಸನ ನಗರದಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಸ್ವಾತಂತ್ರ ವೀರ ಸಾವರ್ಕರ್ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ಭಾಗಿಯಾಗಿದ್ದರು. ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು. ಅವರ ತ್ಯಾಗ ಮತ್ತು ಧೈರ್ಯ ಯುವಕರಿಗೆ ಸ್ಪೂರ್ತಿ. ಅವರ ಜನ್ಮದಿನವನ್ನು ಆಚರಿಸುವ ಮೂಲಕ ಎಲ್ಲರೂ ಸ್ಮರಿಸಿಕೊಳ್ಳಬೇಕು ಎಂದರು. ಮುಂದಿನ ದಿನಗಳಲ್ಲಿ ಅವರ ಜನ್ಮ ದಿನಾಚರಣೆಯಲ್ಲಿ ಎಲ್ಲಾ ಸಂಘಟಕರು, ಪಕ್ಷದವರು ಆಚರಿಸುವಂತೆ ಮನವಿ ಮಾಡಿದರು.
ಇದೆ ಸಂದರ್ಭದಲ್ಲಿ ಸಂಘಟನೆ ಮುಖಂಡರು ಹಾಗೂ ಪದಾಕಾರಿಗಳು ವೀರ ಸಾವರ್ಕರ್ ಘೋಷಣೆಗಳನ್ನು ಕೂಗಿ, ನೆರೆದಿದ್ದ ಅಭಿಮಾನಿಗಳಿಗೆ ಸಿಹಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಹಿಂದೂ ಹಸಿರು ಪಡೆ ರಾಜ್ಯ ಗೌರವಾಧ್ಯಕ್ಷ ವೀರೆಗೌಡ, ಪ್ರಧಾನ ಕಾರ್ಯದರ್ಶಿ ಅವಿನಾಶ್, ರಾಜ್ಯ ಸಂಚಾಲಕ ದಿಲೀಪ್, ಜಿಲ್ಲಾಧ್ಯಕ್ಷ ಅಕ್ಷಯ್‌ಕುಮಾರ್, ಉಪಾಧ್ಯಕ್ಷ ಹರ್ಷಿತ್, ಸಹ ಸಂಘಟನಾ ಕಾರ್ಯದರ್ಶಿ ನಿಖಿಲ್ ಇತರರು ಉಪಸ್ಥಿತರಿದ್ದರು.
ವಿದೇಶದಲ್ಲಿ ವ್ಯಾಸಂಗ ಮಾಡಬೇಕೇ..? ಉದ್ಯೋಗ ಪಡೆಯಬೇಕೇ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..