ಬೆಂಗಳೂರು: ಪ್ರೀತಿ ಮಾಡಿದಾಗ, ಅದನ್ನ ಜನ ತರಹೇವಾರಿಯಾಗಿ ವ್ಯಕ್ತಪಡಿಸುತ್ತಾರೆ. ಕೆಲವರು ಗಿಫ್ಟ್ ನೀಡುವ ಮೂಲಕ, ಇನ್ನು ಕೆಲವರು, ತಿಂಡಿ ಕೊಡಿಸುವ ಮೂಲಕ, ಇನ್ನು ಕೆಲವರು ತಾವಿಬ್ಬರು ಸೇರಿ ತಿಂದ ಚಾಕೋಲೇಟ್ ಕವರ್ ತೆಗೆದಿಟ್ಟುಕೊಳ್ಳುವ ಮೂಲಕ, ಹೀಗೆ ಹಲವು ರೀತಿಯಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಅದೇ ರೀತಿ ಇಲ್ಲೊಬ್ಬ ಮಹಿಳೆ, ತನ್ನ ಪತಿಯ ಮೇಲಿನ ಪ್ರೀತಿಯನ್ನ ಟ್ಯಾಟೂ ಹಾಕಿಸಿಕೊಳ್ಳುವುದರ ಮೂಲಕ ತೋರ್ಪಡಿಸಿದ್ದಾರೆ. ಆದರೆ ಆ ಪ್ರೀತಿ ಎಂಥದ್ದು ಅಂತಾ ಬರೀ, ಆಕೆಯ ಪ್ರಿಯತಮನಿಗಷ್ಟೇ ಅಲ್ಲ, ಬದಲಾಗಿ ಆಕೆಯ ಮುಖ ನೋಡಿದವರಿಗೆಲ್ಲ ತಿಳಿಯುತ್ತದೆ. ಯಾಕಂದ್ರೆ ಆಕೆ ಟ್ಯಾಟೂ ಹಾಕಿಸಿಕೊಂಡಿದ್ದು, ತನ್ನ ಹಣೆಯ ಮೇಲೆ.
ಹೌದು, ಸತೀಶ್ ಎಂಬ ಪ್ರಿಯಕರನ ಪ್ರಿಯತಮೆ ಈ ರೀತಿ ಹಣೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದು, ಕಿಂಗ್ ಮೇಕರ್ ಟ್ಯಾಟೂ ಸ್ಟುಡಿಯೋದ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಈ ವೀಡಿಯೋ ಶೇರ್ ಮಾಡಲಾಗಿದೆ. ಈಕೆ ತನ್ನ ಹಣೆಯ ಮೇಲೆ ಸತೀಶ್ ಎಂಬ ಹೆಸರಿನ ಹಚ್ಚೆ ಹಾಕಿಸಿಕೊಂಡಿರುವ ವೀಡಿಯೋ ಇದಾಗಿದ್ದು, ತರಹೇವಾರಿ ಕಾಮೆಂಟ್ಸ್ ಬಂದಿದೆ.
ಕೆಲವರು ಇದನ್ನು ಟ್ರೂ ಲವ್ ಎಂದಿದ್ದು, ಹಲವರು ಇದನ್ನು ಓವರ್ ಆ್ಯಕ್ಟಿಂಗ್ ಎಂದಿದ್ದಾರೆ. ಅಲ್ಲದೇ, ಇದಕ್ಕೊಂದು ಡಿಸ್ಲೈಕ್ ಬಟನ್ ಇರಬೇಕಿತ್ತು ಎಂದು ಹೇಳಿದ್ದಾರೆ. ಇನ್ನು ಕೆಲವರು ಇದು ಪರ್ಮ್‌ನೆಂಟ್ ಟ್ಯಾಟೂ ಅಲ್ಲಾ ಎಂದು ಹೇಳಿದ್ದಾರೆ.
ವೀಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ
ಪಾಕೀಕರಣ ಬಿತ್ತುವ ವಿದ್ರೋಹಿಗಳಿಗೆ ‘ ಕೇಸರಿ’ ದುಃಸ್ವಪ್ನದ ಅಸ್ತ್ರ: ಡಿಕೆ ವಿರುದ್ಧ ವಿಜಯೇಂದ್ರ ಗರಂ..