Thursday, November 30, 2023

Latest Posts

ನಿಜಕ್ಕೂ ಐಟಿ ಕಿರುಕುಳದಿಂದ ಬೇಸತ್ತಿದ್ದರಾ ಸಿದ್ಧಾರ್ಥ್..?- ಉದ್ಯಮಿ ವಿಜಯ್ ಮಲ್ಯ ಹೇಳಿದ್ದೇನು..?

- Advertisement -

ಬೆಂಗಳೂರು: ವಾವಹಾರಿಕ ನಷ್ಟದಿಂದಾಗಿ ಉದ್ಯಮಿ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ಸಂಗತಿಯನ್ನು ನಿಜಕ್ಕೂ ಯಾರಿಗೂ ಅರಸಿಕೊಳ್ಳಲಾಗ್ತಿಲ್ಲ. ತಮ್ಮ ಚತುರ ಉದ್ಯಮಶೀಲತೆಯಿಂದಾಗಿ ವಿಶ್ವಖ್ಯಾತಿ ಪಡೆದಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ಆತ್ಮಹತ್ಯೆ ದಾರಿ ಹಿಡಿದಿದ್ದೇಕೆ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ಆದ್ರೆ ಸಿದ್ಧಾರ್ಥ್ ಬರೆದಿದ್ದ ಆ ಪತ್ರದಲ್ಲಿ ಐಟಿ ಡಿಜಿ ಕುರಿತಾಗಿ ಉಲ್ಲೇಖಿಸಿರೋ ಬಗ್ಗೆಯೂ ನಾನಾ ಅನುಮಾನ ಎದುರಾಗಿದ್ದು ನಿಜಕ್ಕೂ ಐಟಿ ಇಲಾಖೆ ತೆಗೆದುಕೊಳ್ಳುವ ಕ್ರಮ ಅಷ್ಟು ನಿಷ್ಠುರ ಮತ್ತು ಕಿರುಕುಳ ನೀಡುವ ಹಾಗಿರುತ್ತಾ ಅನ್ನೋ ಪ್ರಶ್ನೆಯನ್ನೂ ಮೂಡಿಸುತ್ತಿದೆ. ಇದಕ್ಕೆ ಉದ್ಯಮಿ ವಿಜಯ್ ಮಲ್ಯ ಮಾಡಿರುವ ಟ್ವೀಟ್ ಕೂಡ ಪುಷ್ಟಿ ನೀಡುವಂತಿದೆ.

ಕಾಫಿ ಉದ್ಯಮದಿಂದ ದೇಶದ ಮನೆ ಮಾತಾಗಿದ್ದು ಕನ್ನಡಿಗ ಸಿದ್ಧಾರ್ಥ್ ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ತಮ್ಮ ಆರಂಭಿಕ ದಿನಗಳಲ್ಲಿ ಅತ್ಯಂತ ಶ್ರಮಪಟ್ಟು, ಬಂದ ಸವಾಲುಗಳನ್ನೆಲ್ಲಾ ಎದೆಗುಂದದೆ ಮೆಟ್ಟಿನಿಂತು ಯಶಸ್ವಿ ಉದ್ಯಮಿಯಾಗಿದ್ದ ಸಿದ್ಧಾರ್ಥ್ ಕೊನೆಗೆ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದರಾ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಅದರೆ ಸಿದ್ಧಾರ್ಥ್ ಬರೆದಿದ್ದ ಪತ್ರದಲ್ಲಿ ‘ಐಟಿ ಇಲಾಖೆಯ ಹಿಂದಿನ ಡಿಜಿ ಕಡೆಯಿಂದ ಕಾಫಿ ಡೇ ಮತ್ತು ಮೈಂಡ್ ಟ್ರೀ ಕಂಪನಿಗಳ ಷೇರು ಅಟ್ಯಾಚ್ ಮಾಡುವ ಕುರಿತಾಗಿ ತೀವ್ರ ಕಿರುಕುಳ ಎದುರಾಯ್ತು. ಅಲ್ಲದೆ ನಾನು ಎಲ್ಲಾ ರೀತಿಯ ತೆರಿಗೆ ಪಾವತಿಸಿದ ಬಳಿಕವೂ ನನಗೆ ತುಂಬಾ ಅನ್ಯಾಯವಾಯ್ತು, ಇದಿಂದರಾಗಿಯೂ ನನಗೆ ತುಂಬಾ ನಷ್ಟವಾಗಿದೆ’ ಅಂತ ಉಲ್ಲೇಖಿಸಿರೋದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಉದ್ಯಮಿ ಸಿದ್ಧಾರ್ಥ್ ಸಾವನ್ನಪ್ಪುವ ಮುನ್ನ ಬರೆದಿದ್ದಾರೆ ಎನ್ನಲಾಗಿರುವ ಪತ್ರ

ಈ ಕುರಿತು ಟ್ವೀಟ್ ಮಾಡಿರುವ ಉದ್ಯಮಿ ವಿಜಯ್ ಮಲ್ಯ ಉದ್ಯಮ ಕ್ಷೇತ್ರದಲ್ಲಿ ಪರೋಕ್ಷವಾಗಿ ಸಿದ್ಧಾರ್ಥ್ ಜೊತೆ ಸಂಬಂಧ ಹೊಂದಿರುವೆ. ಸಿದ್ಧಾರ್ಥ್ ಅತ್ಯದ್ಭುತ ಮತ್ತು ಚತುರ ಉದ್ಯಮಿ. ಸಿದ್ಧಾರ್ಥ್ ಬರೆದಿರುವ ಪತ್ರದಲ್ಲಿ ಉಲ್ಲೇಖವಾಗಿರುವ ವಿಚಾರಗಳನ್ನು ಓದಿದ ನನಗೆ ತುಂಬಾ ಆಘಾತವಾಗಿದೆ. ಸರ್ಕಾರಿ ಸಂಸ್ಥೆಗಳು ಮತ್ತು ಬ್ಯಾಂಕ್ ಗಳು ಯಾರನ್ನೂ ಬೇಕಾದ್ರೂ ಹತಾಶರನ್ನಾಗಿ ಮಾಡಬಲ್ಲವು. ನನಗೂ ಇದೇ ಪರಿಸ್ಥಿತಿ ಎದುರಾಗಿದ್ದು, ನಾನು ತೆಗೆದುಕೊಂಡ ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿದ ಬಳಿಕವೂ ನನಗೇನು ಮಾಡ್ತಾರೆ ಅಂತ ನೋಡೋಣ. ಇದು ಅತ್ಯಂತ ಅಪಾಯಕಾರಿ ಮತ್ತು ಕಟುವಾದ ಧೋರಣೆ ಅಂತ ಉದ್ಯಮಿ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ. ವಿಜಯ್ ಮಲ್ಯ ಮಾಡಿರೋ ಈ ಟ್ವೀಟ್ ಐಟಿ ಇಲಾಖೆಯ ಕ್ರಮದಿಂದಾಗಿ ನಿಜಕ್ಕೂ ಉದ್ಯಮಿಗಳು ಮಾನಸಿಕವಾಗಿ ನಲುಗಿಹೋಗ್ತಾರೆ ಅನ್ನೋದನ್ನು ಸ್ಪಷ್ಟಪಡಿಸುವಂತಿದೆ.

- Advertisement -

Latest Posts

Don't Miss