
ಚಾಮರಾಜನಗರ: ಗುಂಡ್ಲು ಪೇಟೆಯ ವಡ್ಡಗೆರೆ ಗ್ರಾಮಪಂಚಾಯತಿ ವ್ಯಾಪ್ತಿಯವ ಕರಕಲಮಾದಹಳ್ಳಿ ಗ್ರಾಮದ ಹೊರವಲಯದಲ್ಲಿರೋ ಕೋಳಿ ಸಾಕಾಣಿಕೆ ಕೇಂದ್ರದಿಂದ ಸುತ್ತಲಿನಾ ಗ್ರಾಮಸ್ಥರಿಗೆ ಜನಜಾನುವಾರುಗಳಿಗೆ ತೊಂದ್ರೆಯಾಗ್ತಿದೆ. ಇಷ್ಟು ದಿನದಿಂದ ಇಲ್ಲಿನ ದುರ್ವಾಸನೆ ತಡೆದುಕೊಂಡು ದಿನದೂಡುತ್ತಿದ್ದ ಗ್ರಾಮಸ್ಥರು ಇದೀಗ ರೊಚ್ಚಿಗೆದ್ದಿದ್ದಾರೆ. ಈ ಕೆಟ್ಟ ವಾಸನೆಯಿಂದ ಜನರು ಮತ್ತು ಜಾನುವಾರುಗಳಿಗೆ ಸಾಂಕ್ರಾಮಿಕ ರೋಗ ಹರಡೋ ಭೀತಿ ಎದುರಾಗಿದೆ.
ಇನ್ನು ಈ ಮೊದಲು ನೊಣಗಳು ಹೆಚ್ಚಾಗಿದ್ದವು ನಿಜ. ಆದ್ರೀಗ ನೊಣಗಳ ಹಾವಳಿಗೆ ಕಡಿವಾಣ ಹಾಕಲಾಗಿದೆ. ಸುತ್ತಲಿನ ವ್ಯಾಪ್ತಿಯಲ್ಲಿ ಪ್ರತಿದಿನ ಔಷಧ ಸಿಂಪಡಣೆ ಮಾಡಲಾಗುತ್ತಿದೆ. ಸುತ್ತಮುತ್ತಲ ಜನರ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಬೀರದ ರೀತಿಯಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸುತ್ತಿದ್ದೇವೆ ಅಂತ ಇದಕ್ಕೆ ಕೋಳಿ ಸಾಕಾಣಿಕೆ ಕೇಂದ್ರದ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಕೋಳಿ ಸಾಕಾಣಿಕಾ ಕೇಂದ್ರ15 ದಿನದೊಳಗೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳೋ ಮೂಲಕ ಇಲ್ಲಿ ನೊಣಗಳು ಬಾರದಂತೆ ಕ್ರಮ ಕೈಗೊಳ್ತೀವಿ ಅಂತ ನೀಡಿರೋ ಪ್ರತಿಕ್ರಿಯೆಗೆ ಸುತ್ತಮುತ್ತಲ ನಿವಾಸಿಗಳು ಕೊಂಚ ನಿರಾಳರಾಗಿದ್ದಾರೆ. ಆದಷ್ಟು ಬೇಗ ಇದಕ್ಕೆ ಪರಿಹಾರ ಸಿಕ್ಕರೆ ನಾವೂ ನೆಮ್ಮದಿಯಾಗಿರಬಹುದು ಅಂತ ಹೇಳ್ತಿದ್ದಾರೆ.
ಇನ್ನು ಈ ಕೋಳಿಫಾರಂನಿಂದಾಗಿ ಲಾಕ್ ಡೌನ್ ವೇಳೆ ಕೆಲಸವಿಲ್ಲದೆ ಪರದಾಡುತ್ತಿದ್ದ ಸ್ಥಳೀಯ ಯುವಕರಿಗೆ ಕೆಲಸ ನೀಡಿ ಜೀವನಕ್ಕೆ ದಾರಿಯೇನೋ ಮಾಡಿಕೊಟ್ಟಿದೆ ನಿಜ. ಆದ್ರೆ ದುರ್ವಾಸನೆಯಿಂದಾಗಿ ಜನರ ಆರೋಗ್ಯ ಕೆಟ್ಟರೆ ಯಾರಿಂದಲೂ ಆರೋಗ್ಯವನ್ನು ತಂದುಕೊಡೋದಕ್ಕೆ ಸಾಧ್ಯವಾಗೋದಿಲ್ಲ. ಹೀಗಾಗಿ ಕೊಟ್ಟ ಮಾತಿನಿಂತೆ ಈ ಕೋಳಿಫಾರಂ ಸೂಕ್ತ ಕ್ರಮ ಕೈಗೊಂಡು ಇಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಅನ್ನೋದು ಗ್ರಾಮಸ್ಥರ ಒತ್ತಾಯವಾಗಿದೆ.
ಪ್ರಸಾದ್, ಕರ್ನಾಟಕ ಟಿವಿ. ಚಾಮರಾಜನಗರ