Sunday, September 15, 2024

Latest Posts

ಡಿಕೆಶಿಗೆ ಮುಖ್ಯಮಂತ್ರಿ ಯೋಗ..!- ವಿನಯ್ ಗುರೂಜಿ ಹೇಳಿದ್ದೇನು…??

- Advertisement -

ಚಿಕ್ಕಮಗಳೂರು: ಸಚಿವ ಡಿಕೆಶಿಗೆ ರಾಜ್ಯದ ಸಿಎಂ ಆಗೋ ಯೋಗ ಇದೆ ಅಂತ ಹೇಳಲಾಗ್ತಿದ್ದು, ಇದಕ್ಕಾಗಿ ವಿನಯ್ ಗುರೂಜಿ ಆಶೀರ್ವಾದವನ್ನೂ ಪಡೆದಿದ್ದು ಡಿಕೆಶಿ ಬೆಂಬಲಿಗರು ಖುಷ್ ಆಗಿದ್ದಾರೆ.

ನಿನ್ನೆ ಶೃಂಗೇರಿಯ ಋಷ್ಯಶೃಂಗೇಶ್ವರ ಸನ್ನಿಧಿಯಲ್ಲಿ ವರುಣನ ಆಗಮನಕ್ಕಾಗಿ ಪೂಜೆ ಸಲ್ಲಿಸೋದಕ್ಕೆ ತೆರಳಿದ್ದ ಸಚಿವ ಡಿಕೆಶಿ, ಬಳಿಕ ವಿನಯ್ ಗುರೂಜಿಯನ್ನೂ ಭೇಟಿಯಾಗಿದ್ದಾರೆ. ಶೃಂಗೇರಿಯ ದತ್ತಾತ್ರೇಯ ಪೀಠ ಗೌರಿಗದ್ದೆಯ ಆಶ್ರಮದ ವಿನಯ್ ಗುರೂಜಿ ಹೇಳೋ ಭವಿಷ್ಯವೆಲ್ಲಾ ನಿಜವಾಗುತ್ತೆ ಅನ್ನೋ ನಂಬಿಕೆಯಿದೆ.
ಇನ್ನು ಸಿಎಂ ಖುರ್ಚಿ ಮೇಲೆ ಟಾರ್ಗೆಟ್ ಮಾಡಿರೋ ಡಿ.ಕೆ ಶಿವಕುಮಾರ್ ತಾವು ಸಿಎಂ ಆಗುವಂತೆ ಆಶೀರ್ವಾದ ಮಾಡುವಂತೆ ಗುರೂಜಿಯವರಲ್ಲಿ ಕೇಳಿಕೊಂಡಿದ್ದಾರೆ. ಹೀಗಾಗಿ ವಿನಯ್ ಗುರೂಜಿ ಡಿಕೆಶಿಗೆ ಹಾಗೇ ಆಗಲಿ ಅಂತ ಆಶೀರ್ವಾದ ಮಾಡಿದ್ದಾರೆ ಎನ್ನಲಾಗಿದೆ.

ಆದ್ರೆ ನೇರಾನೇರಾ ಭವಿಷ್ಯ ಹೇಳೋ ಗುರೂಜಿ, ಸೋಲಿನ ಹಾದಿಯಲ್ಲಿರುವವರಿಗೆ ನೇರವಾಗಿಯೇ ಭವಿಷ್ಯ ನುಡಿದಿದ್ದಾರೆ.ಅವರು ಹತ್ತಾರು ರಾಜಕಾರಣಿಗಳಿಗೆ ನುಡಿದಿರೋ ಭವಿಷ್ಯ ನಿಜ ಕೂಡ ಆಗಿದೆ. ಈ ನಿಟ್ಟಿನಲ್ಲಿ ಸಚಿವ ಡಿಕೆಶಿಗೆ ವಿನಯ್ ಗುರೂಜಿ ಮಾಡಿರೋ ಆಶೀರ್ವಾದ ಶುಭದ ಸಂಕೇತ ಅನ್ನೋದು ಡಿಕೆಳಿ ಬೆಂಬಲಿಗರ ಅಭಿಪ್ರಾಯವಾಗಿದೆ.

ಮೋದಿಗೂ ಆಶೀರ್ವದಿಸಿದ್ದ ಗುರೂಜಿ…!

ಇನ್ನು ಇದೇ ವಿನಯ್ ಗುರೂಜಿ ರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿದ ಭವಿಷ್ಯವನ್ನೂ ನುಡಿದು ಪ್ರಧಾನಿ ನರೇಂದ್ರ ಮೋದಿಗೂ ಆಶೀರ್ವದಿಸಿದ್ರು. ಲೋಕಸಭಾ ಫಲಿತಾಂಶಕ್ಕೂ ಮುನ್ನವೇ ಭವಿಷ್ಯ ನುಡಿದಿದ್ದ ವಿನಯ್ ಗುರೂಜಿ, ಕಳೆದ ಶ್ರೀರಾಮನವಮಿಯಂದು ಮೋದಿಗೆ ಬಿಲ್ಲು ಬಾಣ ನೀಡಿ ಮೋದಿ ಮತ್ತೆ ಪ್ರಧಾನಿಯಾಗ್ತಾರೆ. ಇನ್ನೂ 8 ವರ್ಷಗಳ ಕಾಲ ಮೋದಿ ಪರ್ವ ಇರಲಿದೆ. ದೇಶವನ್ನ ಒಬ್ಬ ಯೋಗಿ ಆಳುತ್ತಾನೆ ಅಂತ ಭವಿಷ್ಯ ನುಡಿದಿದ್ದೆ . ಇವತ್ತಿನಿಂದ 8 ವರ್ಷ ಮೋದಿ ದೇಶವನ್ನ ಆಳುತ್ತಾರೆ. ರಾವಣನ ಸಂಹಾರಕ್ಕೆ ಶಿವ ಶ್ರೀರಾಮನಿಗೆ ಧನಸ್ಸುಕೊಟ್ಟಿದ್ದ. ಈಗ ಅಭಿನವ ರಾಮನಂತಿರೋ ಮೋದಿಗೆ ಧನಸ್ಸು ಅರ್ಪಣೆಯಾಗಿದೆ . ಭ್ರಷ್ಟಾಚಾರ ತುಂಬಿರೋ ರಾಜಕೀಯ ವ್ಯವಸ್ಥೆ ಶುದ್ಧೀಕರಣಕ್ಕೆ ಈ ಧನಸ್ಸನ್ನು ನೀಡಲಾಗಿದೆ ಅಂತ ವಿನಯ್ ಗುರೂಜಿ ಹೇಳಿದ್ರು. ತಮ್ಮ ಆಶ್ರಮದಲ್ಲಿ ವಿನಯ್ ಗುರೂಜಿ 8 ವರ್ಷಗಳ ಕಾಲ ಪೂಜಿಸಲ್ಪಡುತ್ತಿದ್ದ ಧನಸ್ಸು ಅದಾಗಿತ್ತು. ಆದ್ರೆ ಇದೇ ಗುರೂಜಿ ಈಗ ಡಿಕೆಶಿಗೆ ಸಿಎಂ ಯೋಗ ಇದೆ ಅಂತ ಆಶೀರ್ವದಿಸಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ. ಇನ್ನು ಡಿಕೆಶಿ ಸೇರಿದಂತೆ ಕುಮಾರಸ್ವಾಮಿ, ಯಡಿಯೂರಪ್ಪ, ಶೋಭ ಕರಂದ್ಲಾಜೆ, ರಾಮಲಿಂಗಾ ರೆಡ್ಡಿ ಮುಂತಾದ ರಾಜಕಾರಣಿಗಳು ವಿನಯ್ ಗುರೂಜಿ ಅನುಯಾಯಿಗಳಾಗಿದ್ದಾರೆ.

ಶೃಂಗೇರಿಯ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಜೊತೆ ಸಚಿವ ಡಿಕೆಶಿ ಮತ್ತು ಬೆಂಬಲಿಗರ ಮಾತುಕತೆ
https://www.youtube.com/watch?v=l8k-nq3z-bI
- Advertisement -

Latest Posts

Don't Miss