ಪತ್ನಿ ವಿರುದ್ಧ ಆರೋಪ ಮಾಡಿದ್ದ ಬಿಜೆಪಿ ಕಾರ್ಯಕರ್ತರಿಗೆ ಟಾಂಗ್ ನೀಡಿದ ವಿನಯ್ ಕುಲಕರ್ಣಿ

Dharwad News: ಧಾರವಾಡ: ಶಾಸಕ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾರಿಂದ ಪ್ರೋಟೋಕಾಲ್ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ, ಬಿಜೆಪಿ ಕಾರ್ಯಕರ್ತರು ಈ ಹಿಂದೆ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದರು.

ಈ ಆರೋಪಕ್ಕೆ ಸಂಂಬಂಧಿಸಿದಂತೆ ಇದೀಗ ವಿನಯ್ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ. ಕಿತ್ತೂರು ಹೊರವಲಯದಲ್ಲಿ ಮಾತನಾಡಿರುವ ವಿನಯ್ ಕುಲಕರ್ಣಿ, ನಾನು ಕ್ಷೇತ್ರದಲ್ಲಿ ಇದ್ದಿದ್ದರೆ ಹೇಳುತ್ತಿದ್ದೆ. ನನಗೆ ಧಾರವಾಡಕ್ಕೆ ಕ್ಷೇತ್ರಕ್ಕೆ ಬರದೆ ಇರೋ ತರಾ ಮಾಡಿದ್ದು ಬಿಜೆಪಿ ಅವರು. ಅವರು ನಾಚಿಕೆಗೇಡು ಜನರು, ಮಾನ ಮರ್ಯಾದೆ ಇಲ್ಲದವರು. ಒಬ್ಬ ಮಹಿಳೆಯಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಕೆಲಸ ಮಾಡಿಸುತ್ತಿದ್ದಾಳೆ.

ಕ್ಷೇತ್ರದಲ್ಲಿ ಅಭಿವೃದ್ಧಿಯಲ್ಲಿ ಕುಂಠಿತವಾದ್ರೆ ಮುಂದೆ ನಿಂತು ಕೆಲಸ ಮಾಡಿಸುತ್ತಿದ್ದಾಳೆ. ಅವಳ ಮೇಲೆ ಆರೋಪ ಮಾಡುವವರಿಗೆ ಬಾಯಿಂದ ಯಾವ ಭಾಷೆ ಬಳಸಿದರು ಕಮ್ಮಿ. ಅವರಿಗೆ ನಾಚಿಕೆ ಮಾನ ಮರ್ಯಾದೆ ಇದ್ರೆ ಥರ್ಡರೈಟ್ ಕೆಲಸ ಮಾಡೋದನ್ನ ನಿಲ್ಲಿಸಲಿ. ಅವಳ ಚಪ್ಪಲಿಗೂ ಕಿಮ್ಮತ್ತಿಲ್ಲ ಇವರು ಎಂದು ಬಿಜೆಪಿ ಕಾರ್ಯಕರ್ತರ ವಿರುದ್ಧ ಹರಿಹಾಯ್ದಿದ್ದಾರೆ.

ಕ್ಷೇತ್ರದಲ್ಲಿ ನನ್ನ ಅನುಪಸ್ಥಿತಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿಸುತ್ತಿದ್ದಾಳೆ. ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿ ಪಡಿಸುತ್ತಿದ್ದಾರೆ. ಕೋಳಿಕೆರೆ ಹೂಳೆತ್ತುವಾಗ ಬಿಜೆಪಿ ಪಾಲಿಕೆ ಸದಸ್ಯ ಕೆಲಸವನ್ನ ಬಂದ್ ಮಾಡಿಸಿದ್ದರು. ಅವರಿಗೆ ಪರ್ಸಂಟೇಜ್ ಕೊಡದೆ ಇರೋದಕ್ಕೆ ಜೆಸಿಬಿ ಮುಂದೆ ಬಂದು ಮಲಗಿದ್ರು. ಗುತ್ತಿಗೆದಾರರ ಪರ್ಸಂಟೇಜ್ ಕೊಡದೆ ಇದ್ದಿದಕ್ಕೆ ಬಿಜೆಪಿ ಪಾಲಿಕೆ ಸದಸ್ಯ ಕೆಲಸ ಬಂದ್ ಮಾಡಿಸಿದ್ದರು.

ಇವಾಗ ನಮ್ಮ ಕ್ಷೇತ್ರದಲ್ಲಿ ಕೆಲಸವಾಗುತ್ತಿದೆ ಇದಕ್ಕೆ ವಿರೋಧ ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಧಾರವಾಡ ಗ್ರಾಮೀಣದಲ್ಲಿ ಎಲ್ಲೆಂದರಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಆರೋಪ ಮಾಡೋರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ. ಸುಖಾ ಸುಮ್ಮನೆ ನನ್ನ ಪತ್ನಿ ಮೆಲೆ ಆರೋಪ ಮಾಡುತ್ತಿದ್ದಾರೆ. ನಾನು ಕ್ಷೇತ್ರದಲ್ಲಿ ಇದ್ದಿದ್ದರೆ ಹೇಳುತ್ತಿದ್ದೆ ಅವರಿಗೆ ಎಂದು ವಿನಯ್ ಕುಲಕರ್ಣಿ ಸಿಟ್ಟಿನಲ್ಲಿ ಉತ್ತರಿಸಿದ್ದಾರೆ.

About The Author