Cricket news: ಟೀ ಟ್ವೆಂಟಿ ವಿಶ್ವಕಪ್‌ನಲ್ಲಿ ಭಾಗವಹಿಸಲು ಕಿಂಗ್ ವಿರಾಟ್ ಕೊಹ್ಲಿ ನ್ಯೂಯಾರ್ಕ್‌ಗೆ ತೆರಳಿದ್ದಾರೆ. ಈ ವೇಳೆ ಏರ್ಪೋರ್ಟ್‌ನಲ್ಲಿ ಪಾಪರಾಜಿಗಳಿಗೆ ಗಿಫ್ಟ್ ಕೊಟ್ಟಿದ್ದಾರೆ. ಗಿಫ್ಟ್ ಪಡೆದು ಪಾಪರಾಜಿಗಳು ಧನ್ಯವಾದ ಹೇಳಿದ್ದು, ಈ ಗಿಫ್ಟ್ ಕೊಟ್ಟಿದ್ದು ನಾನಲ್ರಪ್ಪಾ, ಅನುಷ್ಕಾ ಅಂತಾ ಹೇಳಿದ್ದಾರೆ.
ಇನ್ನು ಯಾಕೆ ಅನುಷ್ಕಾ ಪಾಾಪರಾಜಿಗಳಿಗೆ ಗಿಫ್ಟ್ ಕೊಟ್ರು ಅಂತಾ ಅಂದ್ರೆ, ಅನುಷ್ಕಾ ವಿದೇಶದಲ್ಲಿ ತಮ್‌ಮ ಎರಡನೇ ಮಗುವಿಗೆ ಜನ್ಮ ನೀಡಿ, ಅವನನ್ನು ಭಾರತಕ್ಕೆ ಕರೆತರುವಾಗ, ಪಾಪರಾಜಿಗಳು ಅವರ ವೀಡಿಯೋ ಶೂಟ್ ಮಾಡಿದ್ದರು. ಆದರೆ ಅನುಷ್ಕಾ ದಯವಿಟ್ಟು ಈ ವೀಡಿಯೋ ವೈರಲ್ ಮಾಡಿ, ನಮ್ಮ ಗೌಪ್ಯತೆಗೆ ಧಕ್ಕೆ ತರಬೇಡಿ ಎಂದು ರಿಕ್ವೆಸ್ಟ್ ಮಾಡಿದ್ದರು.
ಅದರಂತೆ ಪಾಪರಾಜಿಗಳು ಕೂಡ, ವೀಡಿಯೋ ವೈರಲ್ ಮಾಡದೇ. ವೀಡಿಯೋವನ್ನು ಗೌಪ್ಯವಾಗಿಯೇ ಇರಿಸಿದ್ದಾರೆ. ಹೀಗಾಗಿ ಖುಷಿಯಾಗಿರುವ ಅನುಷ್ಕಾ ಪಾಪರಾಜಿಗಳಿಗಾಗಿ ಬ್ಯಾಗ್ ಸೇರಿ ಇತರ ವಸ್ತುಗಳನ್ನು ಗಿಫ್ಟ್‌ನಂತೆ ಪ್ಯಾಕ್ ಮಾಡಿ, ವಿರಾಟ್ ಕೈಯಲ್ಲಿ ಕೊಟ್ಟು ಕಳುಹಿಸಿದ್ದಾರೆ.
The way he said "Ma'am ne diya bhai, maine nahi" such a cutie🤍🤌 pic.twitter.com/TgX2UadOSy
— Virat Kohli Fan Club (@Trend_VKohli) May 31, 2024
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಿಂಹ ಘರ್ಜನೆ ಮಾಡುತ್ತಿರುವ ನೂತನ ಡಿ.ಸಿ.ಪಿ.ಕುಶಾಲ್ ಚೌಕ್ಸೆ
ಜೂನ್ 2ರಿಂದ ಜೂನ್ 5ರವರೆಗೆ ಕೃ.ವಿ.ವಿ ಮತ ಎಣಿಕೆ ಕೇಂದ್ರದ ಸುತ್ತ ಪ್ರತಿಬಂಧಕಾಜ್ಞೆ ಜಾರಿ