Sports News: ಎರಡನೇಯ ಆವೃತ್ತಿಯಲ್ಲೇ ಐಪಿಎಲ್ ಟ್ರೋಫಿ ಗೆದ್ದು ಹೆಣ್ಮಕ್ಳೇ ಸ್ಟ್ರಾಂಗು ಗುರು ಅನ್ನೋ ಮಾತನ್ನು ಆರ್‌ಸಿಬಿ ಮಹಿಳಾ ಮಣಿಗಳು ಪ್ರೂವ್ ಮಾಡಿ ಆಯ್ತು. ಇನ್ನು ಪುರುಷ ಆಟಗಾರರ ಸಮಯ.
ಈ ಸಲ ಕಪ್ ನಮ್ದೇ ಅಂತಾ ಆರ್‌ಸಿಬಿ ಪುರುಷ ಆಟಗಾರರಿಗೆ ಸಪೋರ್ಟ್ ಮಾಡುತ್ತ, ಕನ್ನಡಿಗರು ಐಪಿಎಲ್‌ಗೆ ಸಜ್ಜಾಗುತ್ತಿದ್ದಾರೆ. ಈ ಸಮಯದಲ್ಲೇ ಅಪ್ಪ ಆಗುವ ಖುಷಿಯಲ್ಲಿದ್ದ ವಿರಾಟ್, ಕ್ರಿಕೇಟ್‌ನಿಂದ ಹಲವು ದಿನಗಳ ಬ್ರೇಕ್ ತೆಗೆದುಕೊಂಡಿದ್ದು, ಹೊಸ ಹೇರ್‌ಸ್ಟೈಲ್‌ನೊಂದಿಗೆ ಬೆಂಗಳೂರಿಗೆ ಬಂದಿಳಿದಿದ್ದಾರೆ. ಅಲ್ಲದೇ, ಇವರ ಆರ್‌ಸಿಬಿ ಜರ್ಸಿ ಕೂಡ ಹೊಸದಾಗಿದೆ.
ಎಕ್ಸ್‌ಪೆನ್ಸಿವ್ ಸನ್‌ಗ್ಲಾಸ್‌ನೊಂದಿಗೆ ಪ್ರ್ಯಾಕ್ಟೀಸ್‌ಗೆ ಬಂದಿಳಿದಿರುವ ವಿರಾಟ್, ಈ ಸಲ ಕಪ್ ಗೆಲ್ಲಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ಇವರ ಹೇರ್‌ಸ್ಟೈಲ್ ಬಗ್ಗೆ ಮಾತನಾಡೋದಾದ್ರೆ, ಇದನ್ನು ಮೋಹ್ವಕ್ ಹೇರ್ ಸ್ಟೈಲ್ ಅಂತಾರಂತೆ. ಇದರೊಂದಿಗೆ ಐಬ್ರೋ ಮೇಲೆ ಒಂದು ಗೆರೆ ಎಳೆದುಕೊಂಡು, ಕೊಹ್ಲಿ ಇನ್ನೂ ಯಂಗ್ ಆಗಿ ಕಾಣ್ತಿದ್ದಾರೆ. ಇವರ ಹೇರ್ ಸ್ಟೈಲ್ ಮಾಡಿದ್ದು, ಪ್ರಖ್ಯಾತ್ ಹೇರ್ ಸ್ಟೈಲಿಶ್, ಅಲೀಮ್ ಹಕೀಮ್.
ಇನ್ನು ನೀಲಿ ಕೆಂಪು ಬಣ್ಣದ ಹೊಸ ಆರ್‌ಸಿಬಿ ಜರ್ಸಿಯಲ್ಲಿ ವಿರಾಟ್ ಮಿಂಚಿದ್ದಾರೆ. ಹಲವು ಸಾರಿ ಧರಿಸಿರುವ ಕಾಸ್ಟ್ಲಿ ಕನ್ನಡಕ ವಿರಾಟ್ ಲೂಕ್ ಮತ್ತಷ್ಟು ಸೂಪರ್ ಕಾಣುವಂತೆ ಮಾಡಿದೆ. ಓಕ್ಲೇ ಬ್ರ್ಯಾಂಡ್‌ನ ಈ ಕನ್ನಡಕದ ಬೆಲೆ 17ರಿಂದ 20 ಸಾವಿರ ಎನ್ನಲಾಗಿದೆ.
ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆ: 2024ರ 9ನೇ ಕೊ*ಲೆ ಕೇಸ್ ಇದು..
ಟಿಕೇಟ್ ಕೈ ತಪ್ಪಿದ್ದಕ್ಕೆ ಬಿಜೆಪಿ ಸಂಸದ ಮುನಿಸ್ವಾಮಿ ಏನು ಹೇಳಿದರು ಗೊತ್ತಾ..?