ದುಬೈ: ಸತತ ಬ್ಯಾಟಿಂಗ್ ವೈಫಲ್ಯದಿಂದ ಬಳಲುತ್ತಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದು ಲಯಕ್ಕೆ ಮರಳುವ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಏಷ್ಯಾಕಪ್ ಆಡಲು ಸಜ್ಜಾಗುತ್ತಿರುವ ವಿರಾಟ್ ಕೊಹ್ಲಿ, ಆಟದಲ್ಲಿ ನನ್ನನಿಂದ ಆಗುತ್ತಿರುವ ಲೋಪದ ಕುರಿತು ಸ್ಪಷ್ಟ ಅರಿವು ಇದೆ. ಸಮಯಕ್ಕೆ ತಕ್ಕಂತೆ ಅವುಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗಿದ್ದರಿಂದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಇಷ್ಟು ವರ್ಷ ಆಡಲು ಸಾಧ್ಯವಾಗಿದ್ದು .
ಈಗಲೂ ನನ್ನ ಮುಂದೆ ಅಂದು ಸವಾಲಿದೆ. ಈ ಪರಿಸ್ಥಿತಿಯು ಮೇಲುಗೈ ಸಾಸದಂತೆ ನೋಡಿಕೊಳ್ಳುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
2014ರಲ್ಲಿ ಇಂಗ್ಲೆಂಡ್‍ನಲ್ಲಿ ನನ್ನ ಸಾಮಥ್ರ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಿಲ್ಲವೆಂಬುದು ಅರಿವಿಗೆ ಬಂತು. ಆಗ ತುಂಬ ಕಠಿಣವಾದ ಸಂದರ್ಭವಾಗಿತ್ತು.
ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಉತ್ತಮವಾಗಿ ಬ್ಯಾಟಿಂಗ್ ಕೌಶಲ ಪ್ರಯೋಗಿಸುತ್ತಿರುವೆ. ಲಯಕ್ಕೆ ಮರಳಿದರೆ ದೊಡ್ಡ ಇನ್ನಿಂಗ್ಸ್ ಕಟ್ಟಬಲ್ಲೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.