- Advertisement -
ಲಂಡನ್:ಗಾಯದ ಸಮಸ್ಯೆ ಕಾರಣ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ.
ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಇತ್ತಿಚೆಗೆ ಮುಕ್ತಾಯವಾದ ಏಕೈಕ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಗಳಲ್ಲೂ ಕ್ರಮವಾಗಿ 11 ಮತ್ತು 20 ರನ್ ಹೊಡೆದಿದ್ದರು. ಎರಡೂ ಟಿ20 ಪಂದ್ಯಗಳಲ್ಲಿ 1 ಮತ್ತು 11 ರನ್ ಹೊಡೆದಿದ್ದರು.
ವಿರಾಟ್ ಫಾರ್ಮ್ ಕುರಿತು ಮಾಜಿ ಕ್ರಿಕೆಟಿಗರಿಂದ ಟೀಕೆಗಳು ಕೇಳಿ ಬಂದಿದ್ದವು.
ಸದ್ಯ ಮೊದಲ ಪಂದ್ಯದಲ್ಲಿ 5 ಬ್ಯಾಟರ್ , 2 ಆಲ್ರೌಂಡರ್ಸ್, 4 ಬೌಲರಸ್ ಗಳನ್ನು ಕಣಕ್ಕಿಳಿಸಲಾಗಿದೆ. ಸೂರ್ಯ ಕುಮಾರ್ ಯಾದವ್ ಹಾಗೂ ದೀಪಕ್ ಹೂಡಾ ಅವರಿಗೆ ಅವಕಾಶ ನೀಡಲಾಗಿದೆ.
- Advertisement -