Monday, December 23, 2024

Latest Posts

ನಿಮ್ಮ ಮಕ್ಕಳು ಹೆಚ್ಚು ಮೊಬೈಲ್ ಅಡಿಕ್ಟ್ ಆಗಿದ್ದರೆ ಗಮನಹರಿಸಿ: ಪೋಷಕರಿಗೆ ಪೊಲೀಸ್ ಅಧಿಕಾರಿಗಳ ಎಚ್ಚರಿಕೆ

- Advertisement -

Bengaluru News: ನಗರದಲ್ಲಿಂದು ಪೊಲೀಸ್ ಲೋಕಾಯುಕ್ತ ದಯಾನಂದ್ ಸುದ್ದಿಗೋಷ್ಠಿ ನಡೆಸಿದ್ದು, ಪೋಷಕರು ಮಕ್ಕಳಿಗೆ ಹೆಚ್ಚು ಸ್ಮಾರ್ಟ್ ಫೋನ್ ಬಳಸಲು ಅವಕಾಶ ಕೊಡಬಾರದು ಎಂದಿದ್ದಾರೆ.

ಸ್ಮಾರ್ಟ್‌ ಫೋನ್‌ನಲ್ಲಿ ಗೇಮ್‌ ಆಡುವುದು ಇಂದಿನ ಮಕ್ಕಳಿಗೆ ಕಾಮನ್ ಆಗಿದೆ. ಆದರೆ ಮಕ್ಕಳು ಅದಕ್ಕೇ ಅಡಿಕ್ಟ್ ಆದರೆ, ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಮಕ್ಕಳು ಹೆಚ್ಚು ಮೊಬೈಲ್ ಅಡಿಕ್ಟ್ ಆಗಿದ್ದರೆ, ಪೋಷಕರು ಮಕ್ಕಳ ಬಗ್ಗೆ ಗಮನ ಹರಿಸಬೇಕು. ಹೆಚ್ಚು ಮೊಬೈಲ್ ಬಳಕೆಗೆ ಅವಕಾಶ ಕೊಡಬಾರದು ಎಂದು ಹೇಳಿದ್ದಾರೆ.

ಈ ಎಚ್ಚರಿಕೆ ಕೊಡಲು ಕಾರಣವೇನೆಂದರೆ, ಇತ್ತೀಚೆಗೆ ಆರ್‌ಆರ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆಯೊಂದು ನಡೆದಿದ್ದು, ಅಪ್ರಾಪ್ತ ಬಾಲಕನೋರ್ವ ಆನ್‌ಲೈನ್ ಗೇಮಿಂಗ್‌ನಲ್ಲಿ ತೊಡಗಿದ್ದ. ಈ ವಿಷಯ ಗೊತ್ತಿದ್ದ ಅವನ ಸ್ನೇಹಿತರು, ಈ ವಿಷಯ ನಿಮ್ಮ ಅಮ್ಮ ಅಪ್ಪನಿಗೆ ಹೇಳುವುದಾಗಿ ಬೆದರಿಸಿ, ಅವನಿಂದ ಹಣ, ಚಿನ್ನಾಭರಣ ದೋಚಿದ್ದಾರೆ. ಹಾಗಾಗಿ ಇಂಥ ಘಟನೆಗಳು ಮರುಕಳಿಸಬಾರದು ಅಂದ್ರೆ, ಪೋಷಕರು ಮಕ್ಕಳ ಮೇಲೆ ಗಮನವಿರಿಸಬೇಕು ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಜನಮನ್ನಣೆ ಗಳಿಸಿದ ಜೆ.ಪಿ.ನಡ್ಡಾ ಅವರ ರೋಡ್ ಷೋ

ಬಿಜೆಪಿ ರಣಹದ್ದಿನ ಹಾಗೆ ನೇಹಾಳ ವಿಷಯದಲ್ಲಿ ರಾಜಕೀಯ ಲಾಭ ತೆಗೆದುಕೊಳ್ಳುತ್ತಿವೆ: ದಿನೇಶ್ ಗುಂಡೂರಾವ್

ಇಲ್ಲಿ ಪೆನ್ ಡ್ರೈವ್ ಖಾಲಿಯಾಗಿದೆ ಅಂತಾ ಜರ್ಮನ್ ಗೆ ಕಳಸಿದ್ರಾ..?: ಪ್ರಜ್ವಲ್ ವಿರುದ್ಧ ಪ್ರಸಾದ್ ಅಬ್ಬಯ್ಯ ವಾಗ್ದಾಳಿ

- Advertisement -

Latest Posts

Don't Miss