- Advertisement -
ರಾಯಚೂರು: ರಾಯಚೂರಿನಲ್ಲಿ ಭಾರೀ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಆದ್ರೂ ಸಹ ಜೀವದ ಹಂಗು ತೊರೆದು ರೈತರು ಹರಿಯುವ ನೀರಿನಲ್ಲೇ ತಮ್ಮ ಜೀವ ಪಣಕ್ಕಿಟ್ಟು ಓಡಾಡುತ್ತಿದ್ದಾರೆ.
ಹೌದು ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣ ಸಮೀಪದ ಉಪ್ಪಾರನಂದಿಗಾಳ ಕಿಲ್ಲಾರಹಟ್ಟಿ ಮುಖ್ಯ ರಸ್ತೆ ನೀರಿನಿಂದ ಜಲಾವೃತವಾಗಿತ್ತು. ಆದ್ರೂ ಸಹ ಬೇರೆ ದಾರಿ ಇಲ್ಲದೆ ರೈತರು ಹರಿಯುತ್ತಿರೋ ನೀರಿನ ಮಧ್ಯೆಯೇ ಎತ್ತಿನಬಂದಿ ಮೂಲಕ ರಸ್ತೆ ದಾಟುತ್ತಿದ್ದ ದೃಶ್ಯ ಕಂಡುಬಂತು.
ಇನ್ನು ಈ ರಸ್ತೆ ಸಮಸ್ಯೆ ಕುರಿತು ಜನಪ್ರತಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವ ಪ್ರಯೋಜನವೂ ಆಗಿಲ್ಲ ಆನ್ನೋದು ರೈತರು ಆರೋಪವಾಗಿದೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ-ರಾಯಚೂರು
- Advertisement -

